ಶಿವಮೊಗ್ಗ: ಜನಪ್ರಿಯ ಶಾಸಕಿ ಹಾಗೂ ಜೆಡಿಎಸ್ ನಾಯಕಿ ಶಾರದಾಪೂರ್ಯಾನಾಯ್ಕ್ ಅವರ ಜನ್ಮದಿನವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನ.22 ರಂದು ನಮ್ಮ ನಾಯಕಿಯ ಜನ್ಮದಿನವಾಗಿದ್ದು, ಈ ಬಾರಿ ಬರಗಾಲ ಇರುವ ಕಾರಣ ಅದ್ಧೂರಿ ಆಚರಣೆ ಇಲ್ಲ. ಭಾನುವಾರ ಬೆಳಗ್ಗೆ 9 ಗಂಟೆಗೆ ಆನವೇರಿಯ ಶ್ರೀ ಹಿರಿಮಾವುರದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹಮ್ಮಿಕೊಳ್ಳಲಾಗಿದೆ. ಅದೇ ದಿನ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ನುರಿತ ವೈದ್ಯರ ತಂಡವು ಭಾಗವಹಿಸಲಿದ್ದು, ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಬೇಕು. ಪಕ್ಷದ ಪ್ರಮುಖರು, ಪದಾಧಿಕಾರಿಗಳು,

ತಾಲೂಕುಗಳ ಮುಖಂಡರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪಕ್ಷದ ಕಾರ್ಯಕರ್ತರು, ಶಾರದ ಪೂರ್ಯಾನಾಯ್ಕ್ ಅವರ ಅಭಿಮಾನಿ ಬಳಗ ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗೀತಾ ಸತೀಶ್ ಮನವಿ ಮಾಡಿದ್ದಾರೆ.