ಶಿವಮೊಗ್ಗ,ಅ.೨೪: ಬಿಜೆಪಿ ಅವರು ನಿಜವಾದ ದೇಶಭಕ್ತರಾಗಿದ್ದರೆ ನಾಥುರಾಮ್ ಗೋಡ್ಸೆಯನ್ನು ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕನೆಂದು ಒಪ್ಪಿಕೊಳ್ಳಲ್ಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಇಂದು ಮಾಧ್ಯಮಗಾರರು ಗಾಂಧಿಜಿಯವರು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಶ್ನೆಗೆ ಅವರು ಉತ್ತರಿಸಿ, ಮಹಾತ್ಮ ಗಾಂಧಿಯನ್ನು ಕೊಂದಿರುವ ಸಂಘಟನೆಗಳು ದೇಶದ ಮೊಟ್ಟ ಮೊದಲು

ಭಯೋತಾದಕ ಸಂಘಟನೆ ಹಾಗೂ ಅವರನ್ನು ಕೊಲೆ ಮಾಡಿ ನಾಥುರಾಮ್ ಗೋಡ್ಸೆ ಸ್ವಾತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದಕ. ಬಿಜೆಪಿ ಅವರು ನಿಜವಾದ ದೇಶಭಕ್ತರಾಗಿದ್ದರೆ. ಸ್ವಾತಂತ್ರ ಹೋರಾಟ, ತ್ರಿವರ್ಣ ಧ್ವಜ ಹಾಗೂ ಭಾರತ ದೇಶದ ಮೇಲೆ ನಂಬಿಕೆ ಇದ್ದರೆ ಇದನ್ನು ಒಪ್ಪಿಕೊಳ್ಳಬೇಕು ಎಂದರು.
ಸ್ಟಿಂಗ್ ಪಿತಾಮಹ ಆರ್ಎಸ್ಎಸ್:
ಸ್ಟಿಂಗ್ ಆಪರೇಷನ್ ಎಂಬ ಕೃತ್ಯ ಈಗೀನಿಂದ ರೂಪಗೊಂಡಿರುವುದಲ್ಲ. ಕಿತ್ತೂರಿನಿಂದ ಹಿಡಿದು ಹಾಗೂ ದೇವೇಂದ್ರಪ್ಪ ಕಾಳಪ್ಪನವರ ಕಾಲದಿಂದ ಹಿಡಿದು ಬಹಳಷ್ಟು ಜನ ರಾಜಕೀಯ ಸೇಡನ್ನು ತಿರಿಸಿಕೊಳ್ಳಲು ಇದನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸ್ಟಿಂಗ್ ಆಪರೇಷನ್ ಮೂಲ ಹಾಗೂ ಆಧುನಿಕ ಭಾರತದಲ್ಲಿ ಇದರ ಪಿತಾಮಹ ಯಾರೆಂದರೆ ಅದು ಆರ್ಎಸ್ಎಸ್ ಹಾಗೂ ಬಿಜೆಪಿಯ ಗುಜರಾತ್ ಮಹಾನೀಯರು. ಇವರೇ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುಜರಾತ್ ಉಸ್ತುವಾರಿಯಾಗಿದ್ದ ಸಂಜಯ್ ಜೋಷಿ ಅವರ ಸ್ಟಿಂಗ್ ಆಪರೇಷನ್ ಮಾಡಿ ಮುಗಿಸಿದರು. ಈ ಸ್ಟಿಂಗ್ ಆಪರೇಷನ್ ಸಂಪ್ರದಾಯದ ಕೀರ್ತಿ ಆ ಮಹಾನೀಯರಿಗೆ ಸಲ್ಲುತ್ತದೆ ಎಂದರು.

ಸ್ಲಿಪರ್ ಸೆಲ್ ಬಿಜೆಪಿ ಮತ್ತು ಆರ್ಎಸ್ಎಸ್:
ಸ್ಟಿಂಗ್ ಆಪರೇಷನ್ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಸ್ಲಿಪರ್ ಸೆಲ್ ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಯಾವ ಸ್ಲಿಪರ್ ಸೆಲ್ ಇಲ್ಲ. ಅದೆನಿದ್ದರೂ ಬಿಜೆಪಿ ಮತ್ತು ಆರ್ಎಸ್ಎಸ್ನಲ್ಲಿ ಇರುವುದು. ಪಕ್ಷದಲ್ಲಿ ಏನಾದರೂ ಈತರ ನಡವಳಿಕೆ ಅಥವಾ ಪಾತ್ರ ಇದ್ದರೆ ಅದು ಯಾರೇ ಆಗಿದ್ದರೂ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಸಾಕ್ಷಿ ಅಥವಾ ಪುರಾವೆ ಸಹಿತಾ ಸಿಕ್ಕರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕೃಪಾ ಆಳ್ವ ಮೇಲೆ ಕ್ರಮ ತೆಗೆದುಕೊಳ್ಳುತ್ತಿರಾ ಎಂಬ ಪ್ರಶ್ನೆಗೆ, ಈಗಾಗಲೇ ಹೇಳಿದ್ದೇನೆ ಈ ಪ್ರಕರಣದಲ್ಲಿ ಯಾರ್ಯಾರು ಇದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳತ್ತೇವೆ. ಇದಕ್ಕೆ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಹಾಗೂ ಪಕ್ಷದ ಕಾರ್ಯದರ್ಶಿಗೆ ನೀಡಲು ಸೂಚಿಸಿದ್ದೇನೆ ಎಂದರು.

ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ಸಚಿವ ಸಂಪುಟದಲ್ಲಿ ಏನೇ ಚರ್ಚೆಯಾಗಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಬಂದಿರುವುದಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಆದರೆ ಸಿದ್ದರಾಮಯ್ಯನವರು ಇವೆಲ್ಲವೂ ಸುಳ್ಳು. ನನ್ನನ್ನು ಬ್ಲಾಕ್ ಮೆಲ್ ಮಾಡಲು ಈ ರೀತಿಯಾಗಿ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ತನಿಖೆಯಾದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ ಹೋರಾಟಗಾರರ ನೆನೆಪು ಉಳಿಯಬೇಕು:
ಮಹಾತ್ಮ ಗಾಂಧಿಯವರು ಶಿವಮೊಗ್ಗ ಜಿಲ್ಲೆಯಲ್ಲಿ ಭೇಟಿ ನೀಡಿದ ಸ್ಥಳಗಳು ಹಾಗೂ ಅವರ ನೆನಪುಗಳು ಉಳಿಯುವ ಕೆಲಸವಾಗಬೇಕು. ಅವರ ಉದ್ದೇಶವೂ ಇಲ್ಲಿನ ಜನರಿಗೆ ಸ್ವಷ್ಟವಾಗಿ ತಿಳಿಯಬೇಕು. ಯಾಕೆಂದರ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಳಗಾಂ ಕ್ರಾಂತಿಕಾರಿ ಜಿಲ್ಲೆಗಳು. ಈ ಜಿಲ್ಲೆಗಳು ಹಲವಾರು ವಿಚಾರಗಳಿಗೆ ಸೈದ್ದಾಂತಿಕವಾಗಿ ಭದ್ರ ಬುನಾದಿ ಹಾಕಿದೆ. ರೈತ ಹೋರಾಟ, ಕಾಗೋಡು ಹೋರಾಟ, ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯಲ್ಲಿ ಸ್ವಾತಂತ್ರ ಹೋರಾಟಕ್ಕೆ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ನೆನಪಿಗಾಗಿ ಏನಾದರೂ ಮಾಡಬೇಕಿದೆ. ಇದರ ಬಗ್ಗೆ ವಿಧಾನ ಪರಿಷತ್ನಲ್ಲೂ ಪ್ರಸ್ತಾಪಿಸಿದ್ದೇನೆ. ಪರಿಷತ್ ಸದಸ್ಯರ ನಿಧಿ ಸೇರಿದಂತೆ ಅಗತ್ಯ ನೆರವು ನೀಡುವುದರ ಕುರಿತು ಚಿಂತನೆ ನಡೆಸಲಾಗುವುದು.
ನಿಗಮ, ಮಂಡಳಿಯ ಅಧ್ಯಕ್ಷ ಬದಲಾವಣೆ ಕುರಿತು ಮಾತನಾಡಿ, ನೆನ್ನೆ ಚುನಾವಣೆಯಾಗಿದೆ. ವಿಧಾನ ಪರಿಷತ್, ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರದ ಅದರ ಫಲಿತಾಂಶ ಬಂದ ಕೂಡಲೇ ಈ ಬಗ್ಗೆ ನಿರ್ಣಯ ಮಾಡಲಾಗುತ್ತದೆ. ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಒಂದು ವಾರದೊಳಗೆ ನಿಗಮ ಮಂಡಳಿ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನವನ್ನು ತುಂಬಲಾಗುತ್ತದೆ ಎಂದರು.