ಶಿವಮೊಗ್ಗ,ಅ, 23 : ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಎಎನ್ ಆರ್ ಎಫ್ -ಐಆರ್ ಜಿ ಸಂಶೋಧನಾ ಯೋಜನೆ: “ಕ್ಯಾಸನೂರು ಅರಣ್ಯ ಕಾಯಿಲೆಗೆ (KFD) ಬಹು-ವೇದಿಕೆಯ ಲಸಿಕೆ ತಂತ್ರಗಳ ವೈಜ್ಞಾನಿಕ ವಿನ್ಯಾಸ: ಸಬ್ಯೂನಿಟ್ ಚಿಮೆರಾ ಮತ್ತು ವೈರಸ್ ಸದೃಶ್ಯ ಕಣ ಆಧಾರಿತ ವಿಧಾನಗಳು” ಯೋಜನೆಯಡಿ ಖಾಲಿ ಇರುವ ‘ಕಿರಿಯ ಸಂಶೋಧನಾರ್ಥಿ’ (ಜೆಆರ್ ಎಫ್ ) ಹುದ್ದೆಯ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಸೂಕ್ಷ್ಮಾಣು ಜೀವಶಾಸ್ತ್ರ (Microbiology), ಜೈವಿಕ ತಂತ್ರಜ್ಞಾನ (Biotechnology), ಜೀವರಸಾಯನಶಾಸ್ತ್ರ (Biochemistry) ಅಥವಾ ಜೀವವಿಜ್ಞಾನದ ಇತರ ವಿಷಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎಸ್ಸಿ.ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಫೆಲೋಶಿಪ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಎ ಎನ್ ಆರ್ ಎಫ್ -ಐಆರ್ ಜಿ ಮಾರ್ಗಸೂಚಿಯನ್ವಯ 3 ವರ್ಷಗಳ ಅವಧಿಗೆ ಪ್ರತಿ ತಿಂಗಳು ರೂ. 37,000/- + ಹೆಚ್ ಆರ್ ಎ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರ, ವಿದ್ಯಾರ್ಹತೆ ಹಾಗೂ ಅನುಭವದ ಧೃಢೀಕೃತ ದಾಖಲಾತಿಗಳೊಂದಿಗೆ ಪ್ರೊ. ಎನ್.ಬಿ. ತಿಪ್ಪೇಸ್ವಾಮಿ, ಪ್ರಧಾನ ಸಂಶೋಧಕರು, ಸ್ನಾತಕೋತ್ತರ ಸೂಕ್ಷ್ಮಾಣು ಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – 577451 ಇಲ್ಲಿಗೆ ನೇರವಾಗಿ ಅಥವಾ ಇ-ಮೇಲ್ nbtmicro@gmail.com ಮೂಲಕ ದಿನಾಂಕ 28/10/2026ರ ಒಳಗಾಗಿ ತಲುಪುವಂತೆ ಸಲ್ಲಿಸಬೇಕು.

ಅರ್ಜಿಯ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.kuvempu.ac.in ನಲ್ಲಿ ಪಡೆಯಬಹುದು. ಸಂದರ್ಶನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.