ಶಿವಮೊಗ್ಗ: ಆರ್.ಎಸ್.ಎಸ್. ವತಿಯಿಂದ ಅ. 25ರಂದು ಭಾನುವಾರ ಮಧ್ಯಾಹ್ನ 3.30ಕ್ಕೆ ನಗರದಲ್ಲಿ ವಿಜಯದಶಮಿ ಪಥಸಂಚÀಲನ ನಡೆಯಲಿದೆ ಎಂದು ಆರ್.ಎಸ್.ಎಸ್. ಪ್ರಮುಖರಾದ ಮಧುಕರ್ ಜೀ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದ ಕೋಟೆ ಮಾರಿಕಾಂಬ ದೇವಸ್ಥಾನ ಹಾಗೂ ಅಲ್ಲಮಪ್ರಭು ಮೈದಾನದಿಂದ ಎರಡು ಪ್ರತ್ಯೇಕ ಪಥಸಂಚಲನಗಳು ಆರಂಭವಾಗಿ ಗೋಪಿ ವೃತ್ತದಲ್ಲಿ ಸಂಗಮಗೊಳ್ಳಲಿದೆ. ನಂತರ ಎನ್ಇಎಸ್ ಮೈದಾನ ತಲುಪಲಿದೆ. ಸಭಾ ಕಾರ್ಯಕ್ರಮ 5.45ಕ್ಕೆ ಪ್ರಾರಂಭವಾಗಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹರಾದ ಮುಕುಂದ್ ಜೀ ಅವರು ಬೌದ್ಧಿಕ ವರ್ಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಸಂವಾದದಲ್ಲಿ ಮಾತನಾಡಿದ ಮಧುಕರ್, ತ್ಯಾಗ ಮತ್ತು ಸೇವೆಯ ಉದ್ದೇಶದಿಂದ ಪರಾಕ್ರಮಶಾಲಿ ಆತ್ಮ ಉನ್ನತಿ ಸಮಾಜಕ್ಕಾಗಿ ಆರ್.ಎಸ್.ಎಸ್. ಜನ್ಮ ತಾಳಿದ್ದು, ಹಿಂದೂ ಸಂಘಟನೆಯ ದೃಷ್ಟಿಯಿಂದ ಡಾ.ಹೆಡಗೇವಾರ್ ತಮ್ಮ ಸಣ್ಣ ವಯಸ್ಸಿನಲ್ಲೇ ವೈದ್ಯಕೀಯ ವೃತ್ತಿ ತೊರೆದು ಆರ್.ಎಸ್.ಎಸ್. ಸ್ಥಾಪನೆ ಮಾಡಿದರು. ನಂತರದ 100 ವರ್ಷಗಳಲ್ಲಿ 4 ಬಾರಿ ವಿವಿಧ ಕಾರಣಗಳಿಗೆ ಆರ್.ಎಸ್.ಎಸ್. ನಿಷೇಧ ಮಾಡಿದ್ದಾರೆ. ಯಾರನ್ನೂ ದ್ವೇಷಿಸದೇ ಶಾಂತವಾಗಿ ಸಂಘದ ಕಾರ್ಯ ಮಾಡುತ್ತಾ ಎಲ್ಲರನ್ನೂ ಹತ್ತಿರ ಮಾಡಿಕೊಂಡು ಬಹುದೊಡ್ಡ ಸಮಾಜದ ದೊಡ್ಡ ಭಾಗವಾಗಿ ಆರ್.ಎಸ್.ಎಸ್. ಅನ್ನು ಜನ ಸ್ವೀಕರಿಸಿದ್ದಾರೆ ಎಂದರು.
ಮೊದಲು ವಿರೋಧಿಸುತ್ತಿದ್ದ ಜನ ಈಗ ಅವರೇ ಸಹಕಾರ ನೀಡುತ್ತಿದ್ದಾರೆ. ಜಾಯಿನ್ ಆರ್.ಎಸ್.ಎಸ್. ವೆಬ್ ಸೈಟ್ ಮೂಲಕ ಪ್ರತಿನಿತ್ಯ ಸಾವಿರಾರು ಜನ ತಾವಾಗಿಯೇ ಬಂದು ಆರ್.ಎಸ್.ಎಸ್. ಸೇರುತ್ತಿದ್ದಾರೆ. ದೇಶವನ್ನು ಪರಂ ವೈಭವದ ಕಡೆಗೆ ಹೋಗಲು ಸಂಘಟನೆ ಅತಿ ಮುಖ್ಯ. ಶತಾಬ್ಧಿ ವರ್ಷದಲ್ಲಿ ಆ ಲಕ್ಷಣಗಳು ಕಾಣುತ್ತಿದೆ. ಲೋಕ ಕಲ್ಯಾಣಕ್ಕಾಗಿ ಭಾರತ ಇನ್ನೂ ಸ್ವಲ್ಪ ಕ್ರಮಿಸಬೇಕಾಗಿದೆ. ಎಲ್ಲಾ ಮಂಡಲ, ಗ್ರಾಪಂ ಮತ್ತು ನಗರ ವ್ಯಾಪ್ತಿಯಲ್ಲಿ ಶಾಖೆಗಳನ್ನು ವಿಸ್ತರಿಸಿಕೊಂಡು ಗುಣಾತ್ಮಕತೆಯನ್ನು ಹೆಚ್ಚಿಸುತ್ತಾ ಬಂದಿದ್ದು, ನೂರಾರು ಸಜ್ಜನರನ್ನು ಜೋಡಿಸಿದೆ. ನಿಷ್ಕ್ರಿಯರನ್ನು ಸಕ್ರಿಯಗೊಳಿಸಿದೆ ಎಂದರು.

ಸಜ್ಜನ ಶಕ್ತಿ, ಯುವ ಶಕ್ತಿ ಮತ್ತು ಮಾತೃ ಶಕ್ತಿ ಜೋಡಿಸಿ ಸಾಮಾಜಿಕ ಪರಿಷರ್ತನೆ ಮಾಡುತ್ತಿದೆ. ಧನಾತ್ಮಕ ಚಿಂತನೆ ಮೂಡಿಸುತ್ತಾ ಸಮಾಜದಲ್ಲಿ ನಮ್ಮ ಸಂಸ್ಕøತಿ ಪರಂಪರೆಯ ಅರಿವು ಮೂಡಿಸುತ್ತಿದೆ. ಶತಾಬ್ಧಿ ಕಾರ್ಯಕ್ರಮದ ಅಂಗವಾಗಿ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಸಿಗಬೇಕು. ಸಮಾಜದಲ್ಲಿ ಎಲ್ಲರಿಗೂ ದುಡಿಮೆಗೆ ಅವಕಾಶ ಇರಬೇಕು. ಆ ಸಮಾಜ ಮಾತ್ರ ಉತ್ತಮ ಸ್ಥಿತಿಗೆ ತಲುಪಬಲ್ಲದು. ಉಚಿತ ನೀಡಿದಾಗ ಆಲಿಸಗಳಾಗುತ್ತಾರೆ ಎಂದರು.
ಭಾರತೀಯ ಚಿಂತನೆ ಇರುವುದು ಸತ್ಯದ ಕಟ್ಟಡ ಕಟ್ಟಲು ಮತ್ತು ಸಮಾನತೆಗಾಗಿ ಸಂಘದಲ್ಲಿ ಸಮಯ ಮತ್ತು ಶ್ರದ್ಧೆ ಪ್ರಧಾನವಾಗಿದ್ದು, ಸಮಾನತೆಯ ಭರವಸೆ ಮೂಡಿಸಲು ಗತಿ ವಿಧಿ ಎಂಬ ಪ್ರತ್ಯೇಕ ಕಾರ್ಯವಿಭಾಗದ ಮೂಲಕ ಸಾಮರಸ್ಯಕ್ಕಾಗಿ ಆಂದೋಲನ ಮಾಡುತ್ತಾ ಇದೆ. ನೀರಿಗೆ ಎಲ್ಲರಿಗೂ ಸಮಾನ ಹಕ್ಕು ಇದೆ. ದೇವಸ್ಥಾನಕ್ಕೆ ಎಲ್ಲರಿಗೂ ಪ್ರವೇಶವಿದೆ. ಸ್ಮಶಾನ ಎಲ್ಲರಿಗೂ ಸಿಗಬೇಕು ಎಂಬುದು ಕೂಡ ನಮ್ಮ ಗತಿ ವಿಧಿಯ ಭಾಗವಾಗಿದೆ ಎಂದರು.

ಯಾವುದೇ ಕಾನೂನುಗಳನ್ನು ಮೀರಿ ಸಂಘರ್ಷ ಮಾಡುವುದು ಆರ್.ಎಸ್.ಎಸ್. ಗುರಿಯಲ್ಲ. ಸರ್ಕಾರದ ವಿರುದ್ಧ ಸಂಘರ್ಷವಿಲ್ಲ. ಅನುಮತಿ ಪಡೆದುಕೊಂಡೇ ಪಥಸಂಚಲನ ನಡೆಸುತ್ತೇವೆ. ಸಂಘವು ಯಾವುದೇ ರಾಜಕೀಯ ಪಕ್ಷವನ್ನು ರಿಮೋಟ್ ಕಂಟ್ರೋಲ್ ಮಾಡಲ್ಲ. ಹಸ್ತಕ್ಷೇಪ ಮಾಡಲ್ಲ. ಲಿಂಗ ಸಮಾನತೆಗೆ ನಮ್ಮ ವಿರೋಧವಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಾಂವಿಧಾನತ್ಮಕವಾಗಿ ಇರಲು ನಮ್ಮ ಅಭ್ಯಂತರವಿಲ್ಲ. ನಾವು ಯಾರ ವಿರುದ್ಧವೂ ಅಲ್ಲ, ಶತಾಬ್ಧಿ ವರ್ಷದಲ್ಲಿ ಶಿವಮೊಗ್ಗ ನಗರದಲ್ಲಿ 38 ವಸತಿಗಳಲ್ಲಿ ವಿಜದಶಮಿ ಉತ್ಸವ ನಡೆದಿದ್ದು, 1836 ಜನ ಭಾಗವಹಿಸಿದ್ದಾರೆ. ಸಂಚಲನದಲ್ಲಿ 3328 ಗಣವೇಷಧಾರಿಗಳು ಭಾಗವಹಿಸಿದ್ದಾರೆ. ಗೃಹ ಸಂಪರ್ಕ ಅಭಿಯಾನದಲ್ಲಿ 56 ಸಾವಿರ ಜನರನ್ನು ಕರಪತ್ರ ನೀಡಿ ಸಂಪರ್ಕಿಸಲಾಗಿದೆ. ಯುವ ಸಮಾವೇಶಗಳನ್ನು ನಡೆಸಿ ನಮ್ಮ ವಿಚಾರ ಮತ್ತು ಸಂಸ್ಕøತಿಯ ಅರಿವು ಮೂಡಿಸಿದ್ದೇವೆ. ಸುಮಾರು 28 ಕಡೆ ಹಿಂದೂ ಸಂಗಮವಾಗಿದ್ದು, 26 ಸಾವಿರ ಜನ ಭಾಗವಹಿಸಿದ್ದಾರೆ. ಸುಮಾರು 23 ಸಮುದಾಯದ 96 ಮುಖಂಡರೊಂದಿಗೆ ಸಾಮಾಜಿಕ ಸದ್ಭಾವ ಕಾರ್ಯಕ್ರಮ ನಡೆದಿದೆ. ಪ್ರಮುಖ ನಾಗರಿಕರು ಗಣ್ಯರು ಮತ್ತು ಸಂಘಟನೆ ಪ್ರಮುಖರೊಂದಿಗೆ ಗೋಷ್ಠಿಗಳು ನಡೆದಿವೆ. 38 ವಾರ್ಡ್ಗಳಲ್ಲಿ ಒಂದು ವಾರದ ಶಾಖೆ 310 ಕಡೆ ನಡೆದಿದ್ದು, ಯುವಕರು ಉದ್ಯಮಿಗಳು ಜೊತೆ ಸಂವಾದ ನಡೆಸಿದೆ. ಶತಾಬ್ಧಿಯ ಉದ್ದೇಶವನ್ನು ಪೂರ್ತಿ ಮಾಡುವ ಪ್ರಯತ್ನ ನಡೆದಿದೆ ಎಂದರು.
ಸಂವಾದದಲ್ಲಿ ಪತ್ರಕರ್ತರು ತಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರ ಪಡೆದರು. ನಗರ ಸಂಘ ಸಂಚಾಲಕ ಲೋಕೇಶ್ವರ್ ಕಾಳೆ ಭಾಗವಹಿಸಿದ್ದರು.