
ಸೊರಬ,ಸೆ. 08: ಪಟ್ಟಣದ ಶ್ರೀ ಬಯಲು ಬಸವೇಶ್ವರ ದೇವಸ್ಥಾನ ದ ಹಿಂಭಾಗ ಸ್ವರ್ಣ ಸಿರಿ ಲೇಔಟ್ ನ ಹೋಗುವ ರಸ್ತೆಯು ಕೆಸರಗದ್ದೆಯಂತೆ ಕಾಣುತ್ತಿರುವ ದೃಶ್ಯ ಜನರ ಸಂಪರ್ಕಕ್ಕೆ ಅಡ್ಡಿ ಯಾಗಿದೆ. ಸಾಗುವ ಅರ್ಧ ಕಿ.ಮೀ. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ರಮ

ನಡೆಸದೆ ಇದ್ದರೆ ಮುಂದಿನ ದಿನಗಳಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸ್ಥಳೀಯರು ಹಾಗೂ ಸಾರ್ವಜನಿಕರು ಪತ್ರಿಕೆಗೆ ತಮ್ಮ ಅಳಿಲನ್ನು ಇವರು ತೋರಿಕೊಂಡಿದ್ದಾರೆ ,

ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಎಲ್ಲರಂತೆ ನಾವು ಪ್ರತಿಭಟನೆ ನಡೆಸುತ್ತ ಕಾಲಕಳೆಯವ ಬದಲು ಪಟ್ಟಣದ ಯುವಕರ ಸಹಕಾರದಿಂದ ರಸ್ತೆಯ ಗುಂಡಿ ಮುಚ್ಚುವ ಮೂಲಕ ಎಲ್ಲರಿಗೂ ಒಳಿತು


ಮಾಡುವುದರೊಂದಿಗೆ ಸರಕಾರದ ಗಮನ ಸೆಳೆಯವ ಕಾರ್ಯ ಮಾಡಿದ್ದೇವೆ ಮಳೆ ಜೋರಾಗಿ ಬಂತು ಅಂದರೆ ಜನರು ಓಡಾಡಲು ಜೀವ ವನ್ನು ಗಟ್ಟಿ ಹಿಡಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದರು.

ಇಷ್ಟರ ಮೇಲೂ ಪುರಸಭೆಯವರು ಎಚ್ಚೆತ್ತುಕೊಳ್ಳಲಿದ್ದರೆ, ಸ್ಥಳೀಯರು ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದರ ಎಚ್ಚರಿಕೆ ನೀಡಿದ್ದಾರೆ.