ಶಿವಮೊಗ್ಗ,ಆ.07:
ಕರ್ನಾಟಕ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ, ಸಂಘಟನಾ ಚತುರ ಹಾಗೂ ಪಕ್ಷದ ಸಂಘಟನಾ ಶಕ್ತಿಯನ್ನು ಬಲಪಡಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹೆಚ್.ಎಸ್. ಸುಂದರೇಶ್ ಅವರು ಮತ್ತೊಮ್ಮೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಪ್ರಯತ್ನ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ನಾಯಕತ್ವ ಹಾಗೂ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವಲ್ಲಿ ಸುಂದರೇಶ್ ಅವರ ಪಾತ್ರ ಗಮನಾರ್ಹ ಎನ್ನಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಕಷ್ಟದ ಸಂದರ್ಭಗಳಲ್ಲೂ ಕಾರ್ಯಕರ್ತರ ಬೆನ್ನಿಗೆ ನಿಂತು ಸಂಘಟನೆಯನ್ನು ಮುನ್ನಡೆಸಿದ ದಿಟ್ಟ ನಾಯಕತ್ವ ಅವರ ರಾಜಕೀಯ ಪಯಣದ ಪ್ರಮುಖ ಅಂಶವಾಗಿದೆ. ಹೀಗಾಗಿ ಮತ್ತೊಮ್ಮೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅವರಿಗೆ ಒಲಿದರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತ್ತೆ ಸಂಭ್ರಮದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಕಾರ್ಯಕರ್ತರಲ್ಲಿದೆ, ಈಗಾಗಲೇ ಪಕ್ಷ ಸಂಘಟನೆಯಲ್ಲಿ ನರಸತ್ತು ಮಲಗಿರುವ ಕಾಂಗ್ರೆಸ್ ಪಕ್ಷಕ್ಕೆ ಜೀವ ಕಳೆ ಬರಲಿದೆ.
ಅನುಭವ, ಸಂಘಟನಾ ಕೌಶಲ್ಯ ಹಾಗೂ ಕಾರ್ಯಕರ್ತರೊಂದಿಗೆ ಹೊಂದಿರುವ ಆತ್ಮೀಯ ಒಡನಾಟ—ಈ ಮೂರು ಅಂಶಗಳು ಸುಂದರೇಶ್ ಅವರ ಪರವಾಗಿ ನಿಲ್ಲಲಿವೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಜಿಲ್ಲಾ ಕಾಂಗ್ರೆಸ್ನ ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದ ನಾಯಕ, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷದ ಬಲವರ್ಧನೆಗೆ ಶ್ರಮಿಸುವ ನಾಯಕತ್ವದ ಗುಣವಿರುವ ಹೆಚ್.ಎಸ್. ಸುಂದರೇಶ್ ಅವರ ಹೆಸರು ಮತ್ತೊಮ್ಮೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಭಂದಿಸಿದಂತೆ ಕೈ ಕಮಾಂಡ್ ಅಂಗಳದಲ್ಲಿ ಮುಂಚೂಣಿಗೆ ಬಂದಿದೆ.

ಸಂಘಟನೆ ಎಂದರೆ ಕೇವಲ ಹುದ್ದೆಯಲ್ಲ, ಅದು ನಿರಂತರ ಕಾರ್ಯಚಟುವಟಿಕೆ ಎಂಬುದನ್ನು ತಮ್ಮ ಕಾರ್ಯಶೈಲಿಯ ಮೂಲಕ ತೋರಿಸಿರುವ ಸುಂದರೇಶ್, ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಹಿರಿಯ ಮುಖಂಡರವರೆಗೆ ಸಂಪರ್ಕದಲ್ಲಿರುವ ಸಂಘಟನಾ ಚತುರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಕ್ಷದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲೂ ಗಟ್ಟಿಗೊಳಿಸುವುದು ಹಾಗೂ ಕಾಂಗ್ರೆಸ್ನ ಚಟುವಟಿಕೆಗಳಿಗೆ ನಿರಂತರ ವೇಗ ನೀಡುವ ನಿಟ್ಟಿನಲ್ಲಿ ಅವರ ಕಾರ್ಯವೈಖರಿ ಪಕ್ಷದೊಳಗೆ ಗಮನ ಸೆಳೆದಿದೆ.
ಸದಾ ಕಾರ್ಯಕರ್ತರ ನೆಚ್ಚಿನ ಸುಂದರೇಶ್:
ಪ್ರಮುಖವಾಗಿ ಸುಂದರೇಶ್ ಅವರ ಮತ್ತೊಂದು ವಿಶೇಷತೆ ಎಂದರೆ ಕಾರ್ಯಕರ್ತರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯ. ಪಕ್ಷದ ಸಾಮಾನ್ಯ ಕಾರ್ಯಕರ್ತನ ಸಮಸ್ಯೆಗೂ ಸ್ಪಂದಿಸುವ ನಾಯಕತ್ವವೇ ಸಂಘಟನೆಯ ನಿಜವಾದ ಶಕ್ತಿ ಎಂಬ ನಂಬಿಕೆಯೊಂದಿಗೆ ಅವರು ಕಾರ್ಯನಿರ್ವಹಿಸುತ್ತಾರೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ.

ಹೀಗಾಗಿ ಮತ್ತೊಮ್ಮೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹೆಚ್.ಎಸ್. ಸುಂದರೇಶ್ ಅವರಿಗೆ ಅವಕಾಶ ದೊರೆತರೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಮತ್ತಷ್ಟು ಚೈತನ್ಯ, ವೇಗ ಮತ್ತು ಹೊಸ ಹುರುಪು ಸಿಗಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.
ಹೆಚ್.ಎಸ್. ಸುಂದರೇಶ್ ಮತ್ತೊಮ್ಮೆ ಅಧ್ಯಕ್ಷರಾದರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮ,ಪಕ್ಷದ ಚಟುವಟಿಕೆಗಳಿಗೆ ಹೊಸ ಕಳೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಅಂತಿಮವಾಗಿ ಪಕ್ಷದ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದ್ದು, ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಕಾರ್ಯಕರ್ತರ ಒಡನಾಟದ ಆಧಾರದ ಮೇಲೆ ಸುಂದರೇಶ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುತ್ತದೆಯೇ? ಎನ್ನುವುದು ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.
ಸುದ್ದಿ ಮೂಲ- ಅಶ್ವಸೂರ್ಯ