ಸಾಗರ : ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮಾಲುಸಹಿತ ಪೇಟೆ ಠಾಣೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ದಾನಾ ಪ್ಯಾಲೇಸ್ ಸಮೀಪದ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋದಾಮಿನ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಅಕ್ರಮವಾಗಿ ಗಾಂಜಾ ಮತ್ತು ಎಂಡಿಎಂ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ದಾಳಿ ಸಂದರ್ಭದಲ್ಲಿ ಹಣ್ಣಿನ ವ್ಯಾಪಾರಿ ಅಕ್ಬರ್ ಬೇಗ್ ಎಂಬಾತನನ್ನು ವಶಕ್ಕೆ ಪಡೆದು ೧೦ಸಾವಿರ ರೂ. ಮೌಲ್ಯದ ೧೫೬ ಗ್ರಾಂ ಒಣಗಾಂಜಾ, ೨೫ಸಾವಿರ ರೂ. ಮೌಲ್ಯದ ೧೦ಗ್ರಾಂ ತೂಕದ ಎಂಡಿಎಂ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದರಿ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಎಸ್ಪಿ ಡಾ. ಬೆನಕಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್, ಪಿಎಸ್ಐ ಶಾಚಿತರಾಜ್, ಸಿಬ್ಬಂದಿಗಳಾದ ರವಿಕುಮಾರ್, ನರೇಂದ್ರ, ಕೃಷ್ಣಮೂರ್ತಿ, ಮೋಹನ್, ಚಿದಾನಚಿದ, ಲೋಹಿತ್ ಇನ್ನಿತರರು ಪಾಲ್ಗೊಂಡಿದ್ದರು.