ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ವತಿಯಿಂದ ದಿನಾಂಕ 05-06-2026 ರ ಶುಕ್ರವಾರ ಬೆಳಗ್ಗೆ 9:00 ರಿಂದ ಸಂಜೆ 4:30ವರೆಗೆ ನೂತನ ಆದಾಯ ತೆರಿಗೆ ಕಾಯ್ದೆ 2025 ರ ಕುರಿತು ವಿಚಾರ ವಿಮರ್ಶೆಯನ್ನು ಖ್ಯಾತ ಚಾರ್ಟೆಡ್ ಅಕೌಂಟೆಂಟ್ ತರುಣ್

ಕೊಟಾರಿ ಇವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ನಡೆಸಿಕೊಡಲಿದ್ದು. ಜಿಲ್ಲೆಯ ಎಲ್ಲಾ ತೆರಿಗೆ ಸಲಹೆಗಾರರು ಈ ಸೆಮಿನಾರ್ ನಲ್ಲಿ ಭಾಗವಹಿಸಿ ಈ ವಿಚಾರ ಸಂಕಿರಣದ ಸದುಪಯೋಗ

ಪಡಿಸಿಕೊಳ್ಳಬೇಕೆಂದು ಕಾರ್ಯದರ್ಶಿಯವರಾದ ಆರ್ ಮನೋಹರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ