ಶಿವಮೊಗ್ಗ, ಜೂ.04:
ಬರುವ ಜೂನ್ ಐದರ ನಾಳೆ ಆಚರಿಸುವ ವಿಶ್ವಪರಿಸರ ದಿನಾಚರಣೆ ಅರ್ಥಪೂರ್ಣವಾಗಿ ಎಲ್ಲೆಡೆ ಆಚರಿಸುವ ಜೊತೆ ಇಂದಿನ ಮಕ್ಕಳಲ್ಲಿ ಪರಿಸರ ಶುಚಿತ್ವದ ಅರಿವು ಮೂಡಿಸುವಂತಾಗಲಿ ಎಂದು ಕಾಂಗ್ರೆಸ್ ಯುವಮುಖಂಡ, ಮೆಸ್ಕಾಂ ನಿರ್ದೇಶಕ ಹೆಚ್. ಎಸ್. ಶರತ್ಚಂದ್ರ ಹೇಳಿದ್ದಾರೆ.
ವಿಶ್ವಪರಿಸರ ದಿನಾಚರಣೆಯನ್ನು ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಇಲಾಖೆಗಳ ಆವರಣದಲ್ಲಿ ಶುಚಿತ್ವ ಕಾಪಾಡುವ ಮೂಲಕ ಆಚರಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ,
ಶಿಕ್ಷಣ, ಕಂದಾಯ, ಸಂಚಾರಿ ಇಲಾಖೆ ಸೇರಿದಂತೆ ಪಾಲಿಕೆಯು ಈ ಬಗ್ಗೆ ಜನಜಾಗೃತಿ ಮೂಡಿಸುವ ಜೊತೆಗೆ ಸ್ವಚ್ಚತೆ, ಗಿಡ ನೆಡುವ ಕಾರ್ಯಕ್ರಮ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.