ಶಿವಮೊಗ್ಗ ಜೂ 02 :ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ನೀಡದಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದ ನಿಯೋಗ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ಸದಸ್ಯ ಸುನಿಲ್ ಲಮಾಯ್ ಅವರನ್ನು ಒತ್ತಾಯಿಸಿತು.

ಮಂಗಳವಾರ ಸಂಜೆ ಇಲ್ಲಿನ ಶ್ರೀಗಂಧದ ಕೋಠಿಯಲ್ಲಿರುವ ಪ್ರದಾನ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಸಿಇಸಿ ಸಮಿತಿ ಭೇಟಿನೀಡಿದ ಸಂದರ್ಭದಲ್ಲಿ ಕೆ.ಎಸ್.ಈ. ನೇತೃತ್ವದ ನಿಯೋಗ ಭೇಟಿನೀಡಿದ ಸಂದರ್ಭದಲ್ಲಿ ನಿಮಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಲು ಅಥವಾ ಸಭೆ ನಡೆಸಲು ಸುಪ್ರೀಂಕೋರ್ಟ್ ನಿರ್ದೇಶಿಸಿದೆಯೇ ಎಂದು ಪ್ರಶ್ನಿಸಿದಾಗ, ಇಲ್ಲ. ಸುಪ್ರೀಂಕೋರ್ಟ್ ಆ ಕುರಿತು ತಮಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸುನಿಲ್ ಲಮಾಯ್ ಹೇಳಿದರು ಎಂದು ಕೆ.ಎಸ್. ಈಶ್ವರಪ್ಪ ಸುದ್ಧಿಗಾರರಿಗೆ ತಿಳಿಸಿದರು.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ೭೫ ಸಾವಿರ ಆಕ್ಷೇಪಣೆಗಳು ಬಂದಿರುತ್ತವೆ. ಇದರ ಬಗ್ಗೆ ತಮಗೇನಾದರೂ ಮಾಹಿತಿ ಇದೆಯೇ ಎಂದು ಕೇಳಿದ್ದಕ್ಕೆ ೭೫ ಸಾವಿರ ಅಕ್ಷಪಣೆಗಳು ತಮ್ಮ ಗಮನಕ್ಕೆ ಬಂದಿರುವುದಿಲ್ಲ ಎಂದು ಸುನಿಲ್ ಲಮಾಯ್ ತಿಳಿಸಿದ್ದಾರೆ. ಇದರ ಬಗ್ಗೆ ಸಭೆಯಲ್ಲಿದ್ದ ಕೆಪಿಸಿಎಲ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಆ ಅಧಿಕಾರಿಗಳು ಮೌನಕ್ಕೆ ಜಾರಿದರು ಎಂದು ಈಶ್ವರಪ್ಪ ತಿಳಿಸಿದರು.
ಕೆ.ಇ. ಕಾಂತೇಶ್ ಅವರು ಪ್ರಾಜೆಕ್ಟ್ನ ಡಿಪಿರ್ ಅನ್ನು ಮಾಹಿತಿ ಹಕ್ಕಿನಲ್ಲಿ ನೀಡಿರುವುದಿಲ್ಲ ಎಂದು ದೂರಿದಾಗ ಸಿಇಸಿ ಸದಸ್ಯರು ಈ ವಿಷಯದಲ್ಲಿ ಕೆಪಿಸಿಎಲ್ ಅಧಿಕಾರಿಗಳು ತಪ್ಪು ಎಸಗಿದ್ದಾರೆ ಎಂದು ಅವರು ತಿಳಿಸಿದರು.
ಕೆ.ಎಸ್.ಈಶ್ವರಪ್ಪನವರು ಕೇಂದ್ರದಿಂದ ಅನುಮತಿ ದೊರೆಯದೆ ಶರಾವತಿ ಪಂಪ್ಡ್ ಸ್ಟೋರೇಜ್ಗೆ ಸುಮಾರು ೧೦,೦೦೦ ಕೋಟಿ ರೂಪಾಯಿ ಟೆಂಡರ್ ಅನ್ನು ಕರೆದಿದ್ದಾರೆ ಎಂದು ತಿಳಿಸಿದಾಗ ಸಿಇಸಿ ಸದಸ್ಯರು ಈ ವಿಷಯವು ಸಹ ಕಾನೂನು ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದ್ದಾಗಿ ಹೇಳಿದರು.
ಸಿಇಸಿ ಸದಸ್ಯರು ಈ ವಿಷಯಗಳನ್ನು ಕೂಲಂಕುಷವಾಗಿ ಪರಿಗಣಿಸಿ ಅಗತ್ಯವಿದ್ದಾಗ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾಗಿ ಹೇಳಿದರು.
ಸಭೆಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಶ್ರೀಕಾಂತ್, ಶೇಖರ್ ಗೌಳೇರ್, ಜನಾರ್ಧನ್ ಪೈ, ಸುಬ್ಬಣ್ಣ, ಮಹಾದೇವ ಸ್ವಾಮಿ, ಸುಬ್ಬಣ್ಣ, ಅಶೋಕ್ ಕುಮಾರ್, ವಿ ರಾಜು, ದಿಲೀಪ್ ನಾಡಿಗ, ರವೀಂದ್ರ, ಎ.ಕೆ. ಚಂದ್ರಪ್ಪ, ಹರ್ಷ, ಪರಿಸರ ರಮೇಶ್ ಮೊದಲಾದವರಿದ್ದರು.