ವರದಿ: ರವಿ ಶಿವಮೊಗ್ಗ
ಶಿವಮೊಗ್ಗ,ಮೇ.23:
ಶಿವಮೊಗ್ಗ ಮಹಾನಗರ ಪಾಲಿಕೆಗೆ ಮಾಯಣ್ಣಗೌಡರು ಅಯುಕ್ತರಾಗಿ ವರ್ಗಾವಣೆಯಾಗಿ ಪದಗ್ರಹಣ ಸ್ವೀಕರಿಸಿದ ದಿನದಿಂದ ಮಹಾನಗರ ಪಾಲಿಕೆ ಸೇರಿದಂತೆ ನಗರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಇಲ್ಲದಂತೆ ಈ ಹಿಂದೆ ಸುಮಾರು ನಾಲ್ಕು ಐದು ಅಧಿಕಾರಿಗಳು ಪರಿಶೀಲನೆ ನಡೆಸಿ ಕೊಡಬೇಕಾಗಿದ್ದ ಈ ಸ್ವತ್ತು – ಖಾತೆಗಳು ಈಗ ಬಹಳ ಸುಲಭವಾಗಿ ಕೇವಲ ಮೇಲಾಧಿಕಾರಿಗಳ ಪರಶೀಲನೆಯಿಂದ ಸರಾಗವಾಗಿ ನಡೆಯುತ್ತಿವೆ.

ಇದರಿಂದ ಸಾರ್ವಜನಿಕರಿಗೆ ಯಾವುದೇ ಅಲೆದಾಟ, ತೊಂದರೆಯಾಗದಂತೆ ಬಹಳ ಸುಲಭವಾಗಿ ಸಿಗುತ್ತಿದ್ದು ಸಾರ್ವಜನಿಕರ ಕೆಲಸಗಳು ಮಹಾನಗರ ಪಾಲಿಕೆಯಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಮಹಾನಗರಪಾಲಿಕೆಯ ಅಧಿಕಾರಿಗಳು ಕೂಡ ಆಯುಕ್ತರು ತಮಗೆ ವಹಿಸಿದ ಸಾರ್ವಜನಿಕರ ಕೆಲಸಗಳನ್ನು ಸರಿಯಾದ ಸಮಯಕ್ಕೆ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಅದರೇ ವಿನೋಬನಗರ ವಲಯ 1 ರಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆ , ಡಾಟಾ ಅಪರೇಟಿವ್ಗಳ ಕೊರತೆ ಕಂಡುಬಂದಿದ್ದು ಇಲ್ಲಿ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಕೆಲವೊಂದು ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ ಎಂಬ ಆರೋಪವಿದೆ.
ಪ್ರತಿನಿತ್ಯ ಇಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ನಡುವೇ ಸಣ್ಣ ಪುಟ್ಟ ವಾಗ್ವಾದ ನಡೆಯುತ್ತಿದ್ದು, ಕೆಲವೇ ಕೆಲವು ಬ್ರೋಕರ್ಗಳು ಇಲ್ಲಿನ ಸಿಬ್ಬಂದಿಗಳಿಗೆ ನಗರದ ಕೆಲ ರಾಜಕೀಯ ನಾಯಕರ ಹೆಸರು ಹಾಗೂ ಕೆಲ ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಹೇಳಿ ಇಲ್ಲಿನ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸಾಕಷ್ಟು ಅರೋಪಗಳಿವೆ.

ಕಾರಣ ಇಲ್ಲಿರುವ ಸಿಬ್ಬಂದಿಗಳ ಕೊರತೆ ಅಥವಾ ಪದೇ ಪದೇ ಕೈ ಕೊಡುವ ಕಂಪ್ಯೂಟರ್ಗಳ ಕೊರತೆ ಕಾರಣ ಎನ್ನಬಹುದು.
ಕನಿಷ್ಟ ಎಂದರೇ ಇಲ್ಲಿ ಎಂಟು ಜನರು ನಿರ್ವಹಿಸಬಹುದಾದ ಕೆಲಸವನ್ನು ಕೇವಲ ನಾಲ್ಕೆ ನಾಲ್ಕು ಜನ ಡಾಟಾ ಅಪರೇಟರ್ ಗಳು ಕೆಲಸ ನಿರ್ವಹಿಸಲು ಹೇಗೆ ಸಾಧ್ಯ ? ಕೆಲ ಮೇಲಾಧಿಕಾರಿಗಳು ನಿರ್ವಹಿಸಬಹುದಾದ ಕೆಲಸವನ್ನು ಈ ಸಿಬ್ಬಂದಿಗಳೇ ನಿರ್ವಹಿಸುತ್ತಿದ್ದು ಮೇಲಾಧಿಕಾರಿಗಳ, ಸಾರ್ವಜನಿಕರ ಅತಿಯಾದ ಒತ್ತಡದಿಂದ ಕೆಲಸಗಳು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಇಲ್ಲಿ ಸಮಸ್ಯೆಗಳಿದ್ದರು ಕೂಡ ಇಲ್ಲಿನ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರಿಗಳೇಕೆ
ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರದೇ ಹಾಗೂ ಸಿಬ್ಬಂದಿಗಳನ್ನು ಹೆಚ್ಚಿಸುವ ಕುರಿತ ವಿಚಾರದಲ್ಲಿ ಮೌನವಾಗಿದ್ದಾರೆ ?
ಇಲ್ಲಿನ ಅಧಿಕಾರಿಗಳಿಗೆ ತಮ್ಮ ಸಿಬ್ಬಂದಿಗಳಗಳ ಸಮಸ್ಯೆ, ಕೊರತೆಯಾಗಲೀ, ಇಲ್ಲಿನ ಸಿಬ್ಬಂಧಿಗಳು ಕೆಲ ಬ್ರೋಕರ್ಗಳಿಂದ ಅನುಭವಿಸುತ್ತಿರುವ ತೊಂದರೆಯಾಗಲೀ ಕಾಣುತ್ತಿಲ್ಲವೇ ?
ಅತಿಯಾದ ಒತ್ತಡದಿಂದ ಮಾನಸಿಕ ಕಿರುಕುಳದಿಂದ ಇಲ್ಲಿನ ಸಿಬ್ಬಂದಿಗಳ ನೆಮ್ಮದಿಗೆ ಸಂಪೂರ್ಣ ಕೊಳ್ಳಿ ಇಟ್ಟಾಂತಾಗಿದೆ. ಈ ಹಿಂದೆ ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳಿಗೆ ಕೆಲ ಬ್ರೋಕರ್ಗಳಿಂದ ಕಾನೂನು ವಿರುದ್ದವಾಗಿ ತಮ್ಮ ಕೆಲಸಗಳನ್ನ ಮಾಡಿಕೊಡದ ಅಧಿಕಾರಿಗಳಿಗೆ ವೈಯಕ್ತಿಕ ವಿಚಾರಗಳನ್ನ ಇಟ್ಟುಕೊಂಡು ಬೆದರಿಕೆ ಸಹ ಹಾಕಲಾಗಿತ್ತು ಎಂಬುದನ್ನ ಈ ಹಿಂದೆ ತುಂಗಾ ತರಂಗ ಪತ್ರಿಕೆ ವರದಿಯನ್ನು ಮಾಡಿತ್ತು.
ಈಗಲೂ ಸಹ ಇಲ್ಲಿನ ಸಿಬ್ಬಂದಿಗಳಿಗೆ ಸಹ ಇದೇ ರೀತಿ ಮುಂದುವರೆದಿದ್ದು, ಈ ಬ್ರೋಕರ್ಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಇವರಿಗೆ ಯಾವ ಅಧಿಕಾರಿಯ ಭಯವೂ ಇಲ್ಲದಂತಾಗಿದೆ. ಈ ಬ್ರೋಕರ್ಗಳಿಂದ ಇಲ್ಲಿನ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ಇವರ ಸಮಸ್ಯೆಯನ್ನು ನೋಡುವವರಾರು? ಸಾರ್ವಜನಿಕರ ಕೆಲಸಗಳನ್ನು ಕ್ಷಣ ಮಾತ್ರದಲ್ಲೆ ಪರಿಶೀಲನೇ ನಡೆಸಿ ಬಗೆಹರಿಸುವ ಖಡಕ್ ಅಧಿಕಾರಿಯಾದ ಮಾಯಣ್ಣಗೌಡರಿಗೆ ಇಲ್ಲಿನ ಸಿಬ್ಬಂದಿಗಳ ಅಧಿಕಾರಿಗಳ ಬಗ್ಗೆ ಗಮನಿಸಲಿ.
ಇಲ್ಲಿ ಸಿಬ್ಬಂದಿಗಳು ಅಧಿಕಾರಿಗಳು ಕೆಲ ಬ್ರೋಕರ್ಗಳಿಂದ ಅನುಭವಿಸುತ್ತಿರುವ ಸಾಕಷ್ಟು ತೊಂದರೆ ಮಾನಸಿಕ ಕಿರುಕುಳ , ಸಿಬ್ಬಂದಿಗಳ ಕೊರತೆ ಇವರ ಸಮಸ್ಯೆಗಳಿಗೆ ಮಾಯಣ್ಣಗೌಡರು ಸ್ಪಂದಿಸುತ್ತಾರೆಯೇ? ಕಾದು ನೋಡಬೇಕಾಗಿದೆ
ಗೈರು ಹಾಜರಿಯಾದ ಅಧಿಕಾರಿ/ ಬಂದಾಗ ಎಣ್ಣೆ ಗಮ್ಮತ್ತಂತೆ, ನಿಜನಾ?

ವಿನೋಬನಗರದ ಮಹಾನಗರ ಪಾಲಿಕೆಯ ಅಧಿಕಾರಿ ಒಬ್ಬ ಕಳೆದ ದಿನಗಳಿಂದ ಕಚೇರಿಗೆ ಬಂದಿಲ್ಲವಂತೆ ಈ ಮನುಷ್ಯ ಬಂದರೆ ಎಣ್ಣೆ ಗಮ್ಮತ್ತಿನ ವಾಸನೆ ಕಚೇರಿ ತುಂಬಾ ಎಲ್ಲಾ ಸುತ್ತಾಡುತ್ತದೆಯಂತೆ ಎಂಬ ಅತ್ಯಂತ ಅರೋಪ ಗಂಭೀರವಾದ ಕೇಳಿ ಬಂದಿದೆ.
ಈ ಮದ್ಯಪಾನದ ಕಥೆ ಒಂದೆಡೆಯಾದರೆ, ಆತ ಎಲ್ಲಾ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಅತ್ಯಂತ ಅವಾಚ್ಯ ಪದಗಳಿಂದ ಕರೆಯುತ್ತಾ, ಜೊತೆಗೆ ತನ್ನನ್ನು ತಾನು ಹೀರೋ ಎಂದುಕೊಂಡು ಎಲ್ಲರನ್ನೂ ಬೆದರಿಸುವ ಕೆಲಸವನ್ನು ಈ ಅಧಿಕಾರಿ ಮಾಡುತ್ತಿದ್ದಾನೆ ಎಂಬ ಆರೋಪ ಕಚೇರಿಯ ವಲಯದಲ್ಲೇ ಕೇಳಿ ಬರುತ್ತಿದ್ದು, ಆಯುಕ್ತರು ಇದರತ್ತ ಒಮ್ಮೆ ಗಮನ ಹರಿಸುವುದು ಸೂಕ್ತ ಎಂಬುದು ಪತ್ರಿಕೆಯ ಅಭಿಲಾಷೆ.
ಇಂತಹ ಘಟನೆಗೆ ಕಾರಣವೆಂಬಂತೆ ಕಳೆದ ಕೆಲ ದಿನಗಳ ಹಿಂದೆ ಜನರೇ ಈ ಅಧಿಕಾರಿಯನ್ನು ಸುತ್ತುವರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡದ್ದು ಬಾರಿ ದೊಡ್ಡ ಪ್ರಮಾಣದ ಗಲಾಟೆ ಆಗಿದ್ದು ಒಂದು ವಿಶೇಷವೇ ಹೌದು. ಈಗಲಾದರೂ ಈ ವ್ಯವಸ್ಥೆ ಸರಿಯಾಗಲೇಬೇಕಿದೆ.