ಶಿವಮೊಗ್ಗ: ನಗರದ ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಇಂದು ಜಿಲ್ಲಾ ಪ್ರಗರಿ ಪರಿಶೀಲನಾ ಸಭೆಯಲ್ಲಿ ಮಾರ್ದನಿಸಿತಲ್ಲದೇ, ಆಸ್ಪತ್ರೆ ನಿರ್ವಹಣೆಗೆ ಇನ್ನು 10-15 ದಿನಗಳೊಗೆ ಸಮಿತಿ ರಚನೆಮಾಡಿ 30 ದಿನಗಳೊಳಗೆ ಸಮಿತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿದ ಅವರು, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ್ ಸರ್ಜಿ, ಶಾರದಾ ಪೂರ್ಯ ನಾಯ್ಕ್, ಬಲ್ಕೀಶ್ ಬಾನು ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೆಗ್ಗಾನ್ ಆಸ್ಪತ್ರೆ ಪರಿಸ್ಥಿತಿ ಶೋಚನೀಯವಾಗಿದೆ. ತಾವು ಮಂತ್ರಿಗಳಾದ ಮೇಲೆ ಒಂದು ಸಭೆ ಕರೆದು ಇದಕ್ಕೆ ಏನಾದರೂ ಪರಿಹಾರ ಸೂಚಿಸಬಹುದು ಅಂತ ಅಂದುಕೊಂಡಿದ್ದೆವು. ಆದರೆ ಇದುವರೆಗೂ ಒಂದು ಸಮಿತಿ ರಚನೆ ಮಾಡಿಲ್ಲ, ಯಾಕಾಗಿ ಇಷ್ಟು ನಿರ್ಲಕ್ಷ್ಯ ಮಾಡ್ತೀರಾ ಎಂದು ಗುಡುಗಿದರು.
ಇದೇ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಆರಗ ಜ್ಣಾನೇಂದ್ರ ಅವರು, ಮೊನ್ನೆಯμÉ್ಟೀ ನಮ್ಮ ಕ್ಷೇತ್ರದ ಒಬ್ಬರು ಕಿಡ್ನಿ ವೈಫಲ್ಯದ ಕಾರಣಕ್ಕೆ ಆಸ್ಪತ್ರೆಗೆ ಬಂದರೆ ಏನೇನೋ ಕಾರಣ ಹೇಳಿ ಇಲ್ಲಿ ಆಗಲ್ಲ, ಮಂಗಳೂರಿಗೆ ಹೋಗಿ ಎಂದು ಹೇಳುತ್ತಾರೆ. ಕೊನೆಗೆ ನಾನು ಡಿ.ಎಸ್. ಅವರನ್ನು ಸಂಪರ್ಕಿಸಿದಾಗ, ಅದು ಹಾಗಲ್ಲ, ಹೀಗಲ್ಲ ಅಂತ ಇಲ್ಲಿಯೇ ಚಿಕಿತ್ಸೆ ಕೊಡುತ್ತೇವೆ. ಅಂತ ಹೇಳ್ತಾರೆ. ಪರಿಸ್ಥಿತಿ ಹೀಗಾದರೆ ಈ ಆಸ್ಪತ್ರೆ ಯಾಕೆ ಬೇಕು ಎಂದು ಆಕ್ರೋಶ ಹೊರ ಹಾಕಿದರು.
ಈ ನಡುವೆ ಮಧ್ಯ ಪ್ರವೇಶಿಸಿದ ಶಾಸಕ ಡಾ. ಧನಂಜಯ್ ಸರ್ಜಿ ಅವರು, ಅವತ್ತು ರಾತ್ರಿಯೇ ಆರಗ ಜ್ಞಾನೇಂದ್ರ ಪೆÇೀನ್ ಮಾಡಿ ನನಗೆ ವಿಷಯ ತಿಳಿಸಿದರು. ಆಗಲೇ ಡಿ.ಎಸ್. ಅವರಿಗೆ ಪೆÇೀನ್ ಮಾಡಿ, ಪೇμÉಂಟ್ ಬಗ್ಗೆ ಮಾಹಿತಿ ಕೇಳಿದಾಗ ಇಲ್ಲಿಯೇ ಚಿಕಿತ್ಸೆ ಕೊಡ್ತೀವಿ ಅಂದರು. ನಾವು ಮಧ್ಯ ಪ್ರವೇಶಿಸಿದಾಗ ಹೀಗೆಲ್ಲ ಕಾರಣ ಹೇಳ್ತಾರೆ. ಯಾರು ಮಧ್ಯ ಪ್ರವೇಶಿಸಿದೇ ಇದ್ದಾಗ ರೋಗಿಗಳ ಗತಿ ಅಧೋಗತಿ. ಇಂತಹ ಸ್ಥಿತಿ ಯಾಕಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಮಿತಿ ರಚನೆ ಮಾಡಿ ಎಂದು ಒತ್ತಾಯಿಸಿದರು.
ಸಚಿವರು ಇದಕ್ಕೆ ಪ್ರತಿಕ್ರಿಯೆ ನೀಡಿ, ಮೆಗ್ಗಾನ್ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. 27 ತಾಲೂಕುಗಳ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಅದಕ್ಕೆ ಅಗತ್ಯ ಸಿಬ್ಬಂದಿ ಕೊರತೆ ಇದೆ. ಅದೇ ಕಾರಣಕ್ಮೆ ಪ್ರತ್ಯೇಕ ಜಿಲ್ಲಾ ಅಸ್ಪತ್ರೆ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿದೆ. ಆದರೂ ಸಹ ಮೆಗ್ಗಾನ್ ಆಸ್ಪತ್ರೆ ನಿರ್ವಹಣೆಗೆ ಇನ್ನು 15 ದಿನಗಳೊಳಗೆ ಸಮಿತಿ ರಚನೆ ಮಾಡಲಾಗುವುದು, ಅಲ್ಲದೆ ಇನ್ನು 30 ದಿನಗಳೊಳಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್ ಎನ್., ಎಎಸ್ಪಿ ಕಾರಿಯಪ್ಪ ಮೊದಲಾದವರಿದ್ದರು.
ಜಿಪಂ ಇತಿಹಾಸದಲ್ಲೇ ಕಾಣದ ಬಂದೋಬಸ್ತ್
ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಉಸ್ತುವಸರಿ ಸಚಿವ ಎಸ್.ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಯಾವುದೇ ಗೌಜು ಗಲಾಟೆಗೆ ಅವಕಾಶವಾಗದಂತೆ ನೋಡಿಕೊಳ್ಳಲು ಸಭಾಂಗಣದ ಹೊರಗೆ ಬಿಗಿ ಪೆÇೀಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಜೆಪಿ ರೈತ ಮೋರ್ಚಾ ಮತ್ತು ಬಜರಂಗದಳಗಳು ಜಿ.ಪಂ.ಸಭೆಗೆ ಆಗಮಿಸಲಿದ್ದ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ನೀಡುವ ಕಾರ್ಯಕ್ರಮವಿತ್ತು. ಸಚಿವರು ಬಂದಾಗ ಮಾತಿನ ಚಕಮಕಿ, ಜಿ.ಪಂ.ಆವರಣದೊಳಗೆ ನುಗ್ಗುವ ಯತ್ನ ಮಾಡಿ ಶಾಂತಿ ಕದಡುವ ಸಂಭವ ಇದೆ ಎಂದು ಭಾವಿಸಿ ಹೆಚ್ವಿನ ಸಂಖ್ಯೆಯ ಪೆÇೀಲಿಸರನ್ನು ನಿಯೋಜಿಸಲಾಗಿತ್ತು. ಯಾರೇ ಮುಖ್ಯ ದ್ವಾರದಿಂದ ಒಳ ಹೋಗುವುದಾದರೂ ಪೆÇೀಲಿಸರ ಸೂಕ್ಷ್ಮ ತಪಾಸಣೆಗೊಳಗಾಗೇ ಹೋಗಬೇಕಾಯಿತು. ಮಾಧ್ಯಮದವರೂ ಈ ತಪಾಸಣೆಯಿಂದ ಹೊರತಾಗಿರಲಿಲ್ಲ. ಜಿ.ಪಂ.ಕೆಡಿಪಿ ಸಭೆಯ ಇತಿಹಾಸದಲ್ಲೇ ಈ ರೀತಿ , ಬಂದೋಬಸ್ತ್, ನಿರ್ಬಂಧ ಆಗಿರಲಿಲ್ಲ ಎಂಬ ಮಾತುಗಳು ಕೇಳಿಬಂದವು.
:
ಕೇಸರಿ ಶಾಲಲ್ಲಿ ಮಿಂಚಿದ ಶಾಸಕರು.
ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೇಸರಿ ಶಾಲು ಧರಿಸಲು ಅವಕಾಶ ನೀಡದೆ ಇರುವ ಆದೇಶದ ವಿರುದ್ಧ ಪ್ರತಿಭಟನೆ ಎಂಬಂತೆ ಬಿಂಬಿಸಲು ಬಿಜೆಪಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ ಅವರು ಕೊರಳಿಗೆ ಮಿರಿ ಮಿರಿ ಮಿಂಚುವ ಕೇಸರಿ ಶಾಲನ್ನು ಧರಿಸಿ ತ್ರೈಮಾಸಿಕ ಕೆಡಿಪಿ ಕಲಾಪದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಅಧ್ಯಕ್ಷತೆ ವಹಿಸಿದ್ದ ಸಚಿವ ಮಧು ಬಂಗಾರಪ್ಪ, ವೇದಿಕೆಯಲ್ಲಿದಗದ ಶಾಸಕ ಬೇಳೂರು ಗೋಪಾಲಕೃಷ್ಣ ಇವರನ್ನು ನೋಡಿ ಮುಗುಳ್ನಗುತ್ತಿದ್ದುದೂ ಅಚ್ವರಿಯುಂಟುಮಾಡಿತು.