ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಜನತಾದಳದ ಜಿಲ್ಲಾ ಕಾಯಾಧ್ಯಕ್ಷರಾಗಿ ನರಸಿಂಹ ಗಂಧದಮನೆಯವರನ್ನು ನೇಮಕ ಮಾಡಲಾಗಿದೆ.
ನರಸಿಂಹ ಗಂಧದಮನೆಯವರು ದುರ್ಗಿಗುಡಿ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಕಕ್ಷರಾಗಿದ್ದಾರೆ. ಹಾಗೆಯೇ ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್, ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾಗಿದ್ದಾರೆ.. ಪಕ್ಷದ ಸಂಘಟನೆಯಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಇವರನ್ನು ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಅವರು ಕಾರ್ಯಾಧ್ತಕ್ಷರನ್ನಾಗಿ ನೇಮಕ ಮಾಡಿದ್ದಾರೆ. ತಮಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಮಾಡುವೆ. ಪಕ್ಷದ ಹಿರಿಯ ಮುಖಂಡರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದಕೊಂಡು ಕೆಳಹಂತದಿಂದ ಪಕ್ಷ ಸಂಘಟಿಸುವೆ ಎಂದು ನರಸಿಂಹ ಗಂಧದಮನೆ ತಿಳಿಸಿದ್ದಾರೆ. (ಫೋಟೋ ಇದೆ)