ಶಿವಮೊಗ್ಗ : ಶಿವಮೊಗ್ಗದ ನಗರದ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದಾರೆ. ಎನ್ಜಿಟಿ ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿಮುಖ್ಯ ಮಂತ್ರಿ ದಿ.ಎಸ್. ಬಂಗಾರಪ್ಪ ಬಡಾವಣೆಯ ನಾಮಕರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ನಗರ ತುಂಬಾ ವೇಗವಾಗಿ ಮತ್ತು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅದಕ್ಕೆಅನುಗುಣವಾಗಿ ನೀರಿನ ಸೌಲಭ್ಯ ಬೇಕಿದೆ. ಆನಿಟ್ಟಿನಲ್ಲಿ ಕ್ರಿಯಾ ಯೋಜನೆಯೊಂದನ್ನು ತಯಾರಿಸಿ, ತಮ್ಮ ಗಮನಕ್ಕೆ ತರಲಿದ್ದೇವೆ. ಅದನ್ನು ಪರಿಗಣಿಸಿ ಹೆಚ್ಚಿನಅನುದಾನ ಕೊಡಬೇಕಿದೆ ಎಂದು ಅವರು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರನ್ನು ಒತ್ತಾಯಿಸಿದರು.
ಬೊಮ್ಮನಕಟ್ಟೆ ಬಡಾವಣೆಗೆ ಬಂಗಾರಪ್ಪ ಅವರ ಹೆಸರು ನಾಮಕರಣ ಮಾಡಿದ್ದರ ಕುರಿತು ಮಾತನಾಡಿದ ಅವರು, ಬಂಗಾರಪ್ಪಾಜಿ ಅವರು ನಾಯಕರಾಗಿದ್ದು, ಜನಮಾನಸದಲ್ಲಿ ಜೀವಂತವಾಗುಳಿದಿರುವುದು ನಮ್ಮಿಂದ ಅಲ್ಲ, ಇದನ್ನು ಮಾಡಿದವರು ಜಿಲ್ಲೆಯ ಜನರು, ರಾಜ್ಯದ ಜನರು ಎಂದುಬಣ್ಣಿಸಿದರು.

ಎರಡು ತಿಂಗಳೊಳಗೆ ಎರಡು ಸಲ ನನ್ನ ತಂದೆಯವರ ಹೆಸರು ನಾಮಕರಣದ ಸಮಾರಂಭದಲ್ಲಿ ಪಾಲ್ಗೋಳ್ಳುತ್ತಿದ್ದೇನೆ. ಇದರಲ್ಲಿನನ್ನ ಪಾತ್ರ ಯಾವುದು ಇಲ್ಲ. ಅವರ ಅಭಿಮಾನಿಗಳಿಂದಲೇ ಆಗುತ್ತಿದೆ. ೨೦೧೬ ರಿಂದಲೇ ಈಬೇಡಿಕೆ ಇತ್ತು.ನನ್ನ ಸೌಭಾಗ್ಯ ಎನ್ನುವ ಹಾಗೆ ಈಗ ನಾನು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾದ ಸಂದರ್ಭದಲ್ಲಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಬಂಗಾರಪ್ಪಾಜಿ ಹೆಸರುನಾಮಕರಣ ಮಾಡುವ ಸಂದರ್ಭ ಬಂದಿದೆ.ಇದು ನನ್ನ ಸೌಭಾಗ್ಯ ಎಂದರು.

೨೦ ಸಾವಿರ ಕೋಟಿ ಬೋರ್ವೆಲ್ ಬಿಲ್ ಕಟ್ಟಲಾಗುತ್ತಿದೆ. ಇದು ಸಂಪೂರ್ಣ ಉಚಿತವಾಗಿ ಮಾಡಿದವರು ಬಂಗಾರಪ್ಪಾಜಿ ಅವರು. ಅವರು ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಇತ್ತಾರಲ್ವಾ ಅದರ ಹಿಂದೆ ಬಡವರ ಅಭಿವೃದ್ಧಿಯ ಕನಸಿತ್ತು. ಆ ಕನಸುಗಳನ್ನು ಎಲ್ಲಾ ಸರ್ಕಾರಗಳು ನನಸಾಗಿರುವ ಕೆಲಸ ಮಾಡುತ್ತಿವೆ. ವಿಶೇಷವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.