ಶಿವಮೊಗ್ಗ, ಮೇ.01:
ಮಾದ್ಯಮದವರಾಗಲಿ, ಸಾರ್ವಜನಿಕರಾಗಲಿ ಯಾವುದೇ ವಿಷಯದಲ್ಲಿ ತಪ್ಪಾಗಿ, ಸಂಪೂರ್ಣ ತಿಳಿದುಕೊಳ್ಳದೇ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಹರಡದಿರಿ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಕೋರಿದರು.
ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಯಾವುದೇ ವಿಚಾರವಾಗಲಿ ಅನಗತ್ಯವಾಗಿ ಪ್ರಸರಣ ಮಾಡದಿರಿ, ನಮ್ಮ ಇಲಾಖೆಯಿಂದ, ನನ್ನಿಂದ ಮಾಹಿತಿ ಪಡೆಯಿರಿ. ಸಮಗ್ರ ಮಾಹಿತಿ ತಿಳಿದುಕೊಳ್ಳದೇ ಸುದ್ದಿ ಹರಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ, ಡಿವೈಎಸ್ಪಿ ಬಾಬು ಅಂಜನಪ್ಪ ಇದ್ದರು.