ಶಿವಮೊಗ್ಗ : ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಆಗಲಿರುವ ನಾಗೇಂದ್ರರವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂದು ಗೌರವಿಸಿ, ಅಭಿನಂದಿಸಿ ಬೀಳ್ಕೊಡಲಾಯಿತು.
ನಾಗೇಂದ್ರ ಅವರು ಕಂದಾಯ ಅಧಿಕಾರಿಯಾಗಿ ಕಂದಾಯ ಉಪ ಆಯುಕ್ತರಾಗಿ ತೆರಿಗೆ ಪಾವತಿಸುವಂತಹ ನಾಗರಿಕರಿಗೆ ಜನಸ್ನೇಹಿ ಅಧಿಕಾರಿಯಾಗಿ ತನ್ನ ಕರ್ತವ್ಯದಲ್ಲಿ ಪಾರದರ್ಶಕ ಹಾಗೂ ಉತ್ತಮ ಕೆಲಸದ ಕಾರ್ಯ ಕ್ಷಮತೆಯಿಂದ ಮತ್ತು ಇವರ ಸಹಪಾಠಿಗಳ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ರಾಜ್ಯದಲ್ಲೇ ಈ ಸ್ವತ್ತು ಶಿವಮೊಗ್ಗ ಮಹಾನಗರ ಪಾಲಿಕೆ ನಂಬರ್ ೧ ಸ್ಥಾನದಲ್ಲಿ ಇರಲು ಕಾರಣರಾದವರು.
ಪಾಲಿಕೆಗೆ ಇಂತಹ ಅಧಿಕಾರಿ ಸಿಕ್ಕಿರುವುದು ಶಿವಮೊಗ್ಗ ಜನತೆಗೆ ಒಂದು ಸೌಭಾಗ್ಯ. ಇವರ ಪ್ರೀತಿ ವಿಶ್ವಾಸ ಶಿವಮೊಗ್ಗ ಜನತೆ ಎಂದೂ ಮರೆಯಲಾರರು. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ. ಸಾರ್ವಜನಿಕ ಜೀವನದಲ್ಲೂ ಸಲಹೆ ಸಹಕಾರ ನೀಡುವಂತಹವರಾಗಿರಲಿ ಎಂದು ಈ ದಿನ ಮಹಾನಗರ ಪಾಲಿಕೆಯ ಅವರ ಕಚೇರಿಯಲ್ಲಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರರಾದ ಗನ್ನಿ ಶಂಕರ್. ನಾಗರಿಕ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಸತೀಶ್ ಕುಮಾರ್ ಶೆಟ್ಟಿ. ಪಾಲಿಕೆಯ ಸದಸ್ಯರುಗಳಾದ ಎನ್.ಕೆ.ಶ್ಯಾಮ್ ಸುಂದರ್, ಆರ್.ಕೆ. ಉಮೇಶ್ ಎಚ್. ಕೃಷ್ಣ, ಸಣ್ಣ ಕೈಗಾರಿಕೆ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ, ನರ್ಸರಿ ರಂಗಸ್ವಾಮಿ. ಎನ್ಇಎಸ್ ಸಂಸ್ಥೆಯ ಪ್ರಭಾಕರ್ ಆಶ್ರಯ ಸಮಿತಿಯ ಮಾಜಿ ಸದಸ್ಯರಾದ ಸೈಯದ್ ಇಫ್ತಿಕರ್ ತೆರಿಗೆ ಪಾವತಿದಾರರಾದ ಚಂದ್ರಶೇಖರ್, ಅಭಿ ಭುವನೇಶ್ವರ್ ಸದಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.