ಶಿವಮೊಗ್ಗ, ಏಪ್ರಿಲ್ 27, : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಪಿಜೆ ಅಬ್ದುಲ್ ಕಲಾಂ ವಸತಿ ಕಾಲೇಜು/ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಹಾಗೂ ಉನ್ನತೀಕರಿಸಿದ ಮೌಲಾನಾ ಆಜಾದ್ ಪದವಿ ಪೂರ್ವ ಕಾಲೇಜುಗಳಿಗೆ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಯ ಉಚಿತ ಪ್ರವೇಶಾತಿಗಾಗಿ ಅಲ್ಪಸಂಖ್ಯಾತ ಸಮುದಾಯ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯ ಹಾಗೂ ಪ.ಜಾ./ಪ.ಪಂ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಹ ವಿದ್ಯಾರ್ಥಿಗಳು ಜಾಲತಾಣಣ https://domkarnataka.gov.in ರಲ್ಲಿ ಮೇ 16 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್ 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ದೂ.ಸಂ.: 08182-220206, ಶಿವಮೊಗ್ಗ ಮೇಲಿನಹನಸವಾಡಿ ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಕಾಲೇಜಿನ ಪ್ರಾಂಶುಪಾಲರು -897117166672, ಭದ್ರಾವತಿಯ ದೊಡ್ಡೇರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಪ್ರಾಂಶುಪಾಲರು-9591237905, ಶಿಕಾರಿಪುರ ಉಡುಗಣಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು -9036866642, ಸೋಮಿನಕೊಪ್ಪ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಾಂಶುಪಾಲರು-8971630605, ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರ ಶಿವಮೊಗ್ಗ-7676888388, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಸೊರಬ-9513815513, ಶಿಕಾರಿಪುರ-7829136724, ಹೊಸನಗರ-9008447029, ಸಾಗರ-7338222907 ಗಳನ್ನು ಸಂಪರ್ಕಿಸುವುದು.