ಹುಡುಕಾಟದ ವರದಿ: ಗಜೇಂದ್ರ ಸ್ವಾಮಿ
ಶಿವಮೊಗ್ಗ, ಏ.20:
ಎಸಿ ರೂಮಿನಲ್ಲಿ ಕುಳಿತುಕೊಳ್ಳದೇ ಬೀದಿ ಸುತ್ತಾಡುತ್ತಾ, ಶಿವಮೊಗ್ಗ ನಗರದ ಇಡೀ ಸಂಚಾರಿ ವ್ಯವಸ್ಥೆಗೆ ಅತ್ಯುತ್ತಮ ನಿಯಂತ್ರಣಗಳನ್ನು ಹಾಗೂ ಕಡಿವಾಣಗಳನ್ನು ಹಾಕುವಲ್ಲಿ ಇಂದಿನ ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರ ಹಾಗೂ ಕೆಲ ಎಎಸ್ ಐಗಳ ಕಾರ್ಯವನ್ನು ಶಿವಮೊಗ್ಗ ನಗರದ ನಾಗರಿಕರು, ಅದರಲ್ಲೂ ವಾಹನ ಸವಾರರು ಅತ್ಯಂತ ವಿಶೇಷವಾಗಿ ಗೌರವಿಸಿದ್ದಾರೆ, ಶ್ಲಾಘಿಸಿದ್ದಾರೆ.
ಶಿವಮೊಗ್ಗ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಾ ವಾಹನ ಸಂಚಾರಿ ವ್ಯವಸ್ಥೆಗೆ ಹಾಗೂ ಫುಟ್ಬಾತ್ ಗಳ ಮೇಲೆ ಜನ ಸಂಚಾರ ಸುಗಮವಾಗಿ ನಡೆಯಲು ಮತ್ತು ಅತ್ಯುತ್ತಮ ವಾಹನ ಸಂಚಾರಿ ವಿಚಾರಕ್ಕಾಗಿ ಇರುವ ಗುರುತುಗಳನ್ನು ತಾವೇ ತಮ್ಮ ಸಿಬ್ಬಂದಿಗಳಿಂದ ಮಾಡಿಸುತ್ತಾ, ಉತ್ತಮ ಕಾರ್ಯ ಮಾಡುತ್ತಿರುವುದನ್ನು ನಿಜವಾಗಿಯೂ ಜನತೆ ಶ್ಲಾಘಿಸಿದ್ದಾರೆ.


ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಮೆಗಾನ್ ಆಸ್ಪತ್ರೆ ಬಳಿಯಲ್ಲಿ ನಿರ್ಜೀವ ವಸ್ತುವಂತಿದ್ದ ತಳ್ಳೋಗಾಡಿಗಳನ್ನು ಕೆರವುಗೊಳಿಸಿದ್ದ, ಟಾಪಿಕ್ ಪೊಲೀಸರು ಶಿವಮೊಗ್ಗ ಸವಳಂಗ ರಸ್ತೆಯ ಅತಿ ಪ್ರಮುಖವಾದ ಆರ್ ಟಿ ಓ ರಸ್ತೆಯ ಮಗ್ಗುಲಲ್ಲಿದ್ದ ಗಾಡಿಗಳನ್ನು ಸಹ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂತೆಯೇ ಶಿವಮೊಗ್ಗ ನಗರದಲ್ಲಿ ದುರ್ಗಿಗುಡಿಯ ಬಹಳಷ್ಟು ಕಡೆ ಪ್ರಭಾವಿಗಳು ಆಸ್ಪತ್ರೆ, ಹೋಟೆಲ್ ಗಳ ಮುಂದಿನ ಪುಟ್ ಫಾತನ್ನ ಅವರ ಆಸ್ತಿ ಎಂದುಕೊಂಡಿದ್ದಾರೆ. ಈ ಭಾಗದಲ್ಲಿ ಆಸ್ಪತ್ರೆಗಳ ಮುಂದೆ ಅವರು ಕನಿಷ್ಠ ಇಬ್ಬರು ವಾಚ್ಮನ್ ಗಳನ್ನು ನೇಮಕ ಮಾಡಿ ಅವರಿಂದ ಯಾವುದೇ ವಾಹನಗಳು ಅಲ್ಲಿ ನಿಲ್ಲದಂತೆ ನೋಡಿಕೊಳ್ಳುವ, ತಮ್ಮ ಮನೆ ಬಾಗಿಲು ಸ್ವಚ್ಛವಾಗಿಟ್ಟುಕೊಳ್ಳುವ ಪ್ರಯತ್ನ ನಾಗರಿಕರಿಗೆ ಕಿರಿಕಿರಿ ಉಂಟು ಮಾಡುವುದಿಲ್ಲವೇ..? ಯಾಕೆಂದರೆ ಬೇರೆ ಕಡೆ ಇಕ್ಕಟ್ಟಾಗಿ ಗಾಡಿ ನಿಲ್ಲಿಸಬೇಕು. ಇವರ ವ್ಯಾಪಾರದ ಮನೋದೃಷ್ಟಿಯ ವೈದ್ಯಕೀಯ ವೃತ್ತಿ ಇಲ್ಲಿ ಇಡೀ ವ್ಯವಸ್ಥೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದು ದುರಂತದ ಸಂಗತಿ ಅಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಏಕೆಂದರೆ, ವಾಹನ ಸವಾರ ದೂರದ ಎಲ್ಲೋ ಗಾಡಿ ನಿಲ್ಲಿಸಿ ಮತ್ತೆ ಇಲ್ಲಿಗೆ ಬಂದು ತನ್ನ ಕಾರ್ಯ ನಿರ್ವಹಿಸುವುದು ಎಷ್ಟು ಕಷ್ಟ ಎಂಬುದನ್ನು ಕಿಂಚಿತ್ತು ಅವಲೋಕಿಸುವುದು ಅಗತ್ಯವಲ್ಲವೇ? ಗುರುವಾರದಂದು ಮಾತ್ರ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ಭಕ್ತರು ರಾಯರ ನೋಡಲು, ನೆನೆಯಲು ಬರುತ್ತಾರೆ. ಆ ಭಕ್ತರ ವಾಹನಗಳು ಸಹ ಅಲ್ಲಿ ನಿಲ್ಲುವಂತಿಲ್ಲ. ಅಂದರೆ ಆ ಪ್ರಭಾವಿಗಳ ಶಕ್ತಿ ಹಾಗೂ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಗಮನಿಸಬೇಕಲ್ಲವೇ?
ದುರಂತವೆಂದರೆ ಅವರ ಆಸ್ಪತ್ರೆ ಮುಂದೆ ಟೀ ಅಂಗಡಿಗಳನ್ನು, ಜ್ಯೂಸ್ ಅಂಗಡಿಗಳನ್ನು ಅವರೆ ಹಾಕಿಸಿಕೊಂಡಿರುವುದು ಎಚ್ಚರಮಟ್ಟಿಗೆ ಸರಿ? ಅಲ್ಲಿರುವ ರೋಗಿಗಳ ಪೋಷಕರಿಗೆ ಜ್ಯೂಸ್ ಬೇಕು ಎಂಬುದೇನೋ ನಿಜ. ಆದರೆ ಅದು ಸಹ ಅವರ ಆಯಕಟ್ಟಿನ ಜಾಗದಲ್ಲಿ ಇರುವ ಫುಟ್ಬಾತ್ ಮೇಲೆ ಹಾಕಿಕೊಂಡರೆ ಹೇಗೆ? ಇದು ಕಾನೂನು ಪ್ರಕಾರ ಸರಿ ಎಂಬುದಾದರೆ ತಳ್ಳು ಗಾಡಿಯ ಮೂಲಕ ಹಣ್ಣು ಹಂಪಲು, ಜ್ಯೂಸ್ ಮಾರುವವನು ಈ ಪೊಲೀಸರಿಗೇಕೆ ದುಷ್ಟರಾಗಿ ಕಾಣುತ್ತಾರೆ. ಅವರು ಸಂಚಾರಿ ವ್ಯವಸ್ಥೆಗೆ ಕಿರಿಕಿರಿ ಮಾಡುತ್ತಾರೆ ಎಂಬುದಾದರೆ, ಇವರೇನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಖಡಕ್ ಅಧಿಕಾರಿ ದೇವರಾಜ್ ಸರ್, ಇತ್ತ ಒಮ್ಮೆ ಗಮನಿಸಲಿ ಎಂಬುದು ಅವರ ಆತ್ಮೀಯ ಮನವಿ. ಅಂತೆಯೇ ಎಪಿಎಂ ರಸ್ತೆಯ ಮಗ್ಗಲಲ್ಲಿರುವ ಆಸ್ಪತ್ರೆ ಆವರಣದಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ಅತ್ಯಂತ ಕಷ್ಟ ಆಗಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಇಂತಹ ವ್ಯವಸ್ಥೆಯನ್ನು ಬದಲಿಸುವ ಬಗ್ಗೆ ಗಮನಿಸಲಿ ಎಂಬುದು ಶಿವಮೊಗ್ಗ ನಗರದ ವಾಹನ ಸಂಚಾರದ ಹಾಗೂ ಪಾದಾಚಾರಿಗಳ ಪ್ರೀತಿಯ ಮನವಿ. ಯಾರದೇ ಮರ್ಜಿ ಇದ್ದರೂ ಅದಕ್ಕೆ ದೇವರಾಜ್ ಮಣಿಯುವುದಿಲ್ಲ ಎಂಬ ನಂಬಿಕೆ ಜನರದು. ಜಿಲ್ಲಾ ರಕ್ಷಣಾಧಿಕಾರಿಗಳು ದೇವರಾಜ್ ಅವರ ಈ ಕಾರ್ಯಕ್ಕೆ ಬೆಂಗಾವಲಾಗಿ ನಗರದ ಸುಗಮ ಸಂಚಾರ ಹಾಗೂ ವಾಹನ ನಿಲುಗಡೆಗೆ ಪ್ರೋತ್ಸಾಹಿಸಲಿ ಎಂಬುದು ನಮ್ಮ ಓದುಗರ. ಮನವಿ