ಶಿವಮೊಗ್ಗ: ಗ್ಯಾಸ್ ಬಂಕ್ಗಳಲ್ಲಿ ಮನಸ್ಸಿಗೆ ಬಂದಹಾಗೆ ದರ ನಿಗಧಿ ಮಾಡಿ ಸಾರ್ವಜನಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಆಟೋ ಚಾಲಕರು ದಿನ ನಿತ್ಯ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಯುದ್ಧ ಶುರುವಾಗಿ 36 ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಸರಿಯಾಗುತ್ತೆ, ನಾಳೆ ಸರಿಯಾಗುತ್ತೆ ಅಂತ ದಿನ ಕಳೆಯುತ್ತಾ ನಾವುಗಳು ಆಟೋ ಚಾಲಕರು ದಿನೇ ದಿನೇ 10ರೂ. 20ರೂ, 30ರೂ. 40 ರೂಪಾಯಿಗಳ ತನಕ ಗ್ಯಾಸ್ ಬೆಲೆ ಏರಿಯಾಗುತ್ತಿದೆ. ಇಲ್ಲಿಯವರೆಗೆ ಎಂ.ಪಿ ಯಾಗಲೀ, ಎಂ.ಎಲ್.ಎ ಆಗಲೀ, ಎಂ.ಎಲ್.ಸಿ ಗಳಾಗಲೀ ಜನಪ್ರತಿನಿಧಿಗಳಾಗಲಿ, ಚಾಲಕರ ಬಗ್ಗೆ ಗಮನಹರಿಸದೇ ಮತ್ತು ಈ ಬೆಲೆ ಏರಿಕೆಯಲ್ಲಿ ಮೋಟಾರ್ ಬಾಡಿಗೆ, ಮೀಟರ್ ಬಾಡಿಗೆಗೆ, ಪ್ರೀಪೇಡ್ ಬಾಡಿಗೆಗೆ ಸೇವೆ ಕೊಡಲು ಸಾಧ್ಯವೇ ಜನಗಳು ಸಹ 10 ರೂ ಹೆಚ್ಚಿಗೆ ಕೊಟ್ಟು ಸಹಕರಿಸುವುದಿಲ್ಲ. ಎಫ್.ಸಿ ನೋಡಿದರೆ 3 ಭಾಗದಷ್ಟು ಹೆಚ್ಚು. ಇನ್ಸೂರೆನ್ಸ್ ಬಿಡಿಭಾಗಗಳು, ಮೆಕಾನಿಕ್ ದರ ಹಾಗೆ ಹಾಲು, ತರಕಾರಿ, ಅಕ್ಕಿ, ಎಣ್ಣೆ, ಬೇಳೆ-ಕಾಳು, ಬಸ್ದರ, ರೈಲು ದರ, ದಿನಸಿ ಪದಾರ್ಥಗಳು, ಕೆ.ಇ.ಬಿ ಬಿಲ್ಲು, ನೀರಿನ ಬಿಲ್ಲು, ಯು.ಜಿ.ಡಿ., ಮನೆ ಕಂದಾಯ, ಪ್ರತಿಯೊಂದರ ದರ ಹೆಚ್ಚಾಗಿ ಆಗಿ ಜೀವನ ಮಾಡುವುದು ಕಷ್ಟವಾಗಿದೆ. ನೌಕರರ ಸಂಬಳ ಮಾತ್ರ ಪ್ರತಿ ತಿಂಗಳು ಸರಿಯಾಗಿ ಸಿಗುವುದರಿಂದ ಅವರುಗಳು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಆದರೆ ಬಡ ಆಟೋ ಚಾಲಕರ ಪಾಡು 40 ರೂಪಾಯಿ ಹೆಚ್ಚಿಗೆOಗಿದ್ದರೂ ಆಟೋ ಸೇವೆ ಅದೇ ದರಕ್ಕೆ ಕೊಡಬೇಕು. ಇದು ಯಾವ ನ್ಯಾಯ? ಚಾಲಕರ ಕಷ್ಟ ಹೇಳುವುದಕ್ಕೆ ಆಗುತ್ತಿಲ್ಲ. ನಾವುಗಳು ಬಾಡಿಗೆ ಮನೆಯಲ್ಲಿ ಜೀವನ ಮಾಡಬೇಕೋ? ಬೇಡವೋ? ಮನೆಯಲ್ಲಿ ವಯಸ್ಸಾದ ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಅಕ್ಕ-ತಂಗಿಯರನ್ನು ಈ ದುಡಿಮೆಯಲ್ಲಿ ಹೇಗೆ ಸಾಕಬೇಕು ಎಂದು ಅಳಲು ತೋಡಿಕೊಂಡರು.