

ಬೆಂಗಳೂರು ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಜಾಗ ಲಪಟಾಯಿಸಲು ಮುಂದಾಗಿದ್ದ ಶಿವಮೊಗ್ಗದ ಬಿಜೆಪಿ ಪ್ರಮುಖರೂ, ಶಿವಮೊಗ್ಗದ ಬಿಜೆಪಿ ಶಾಸಕರೂ ಆದ ಶ್ರೀನಾಥ್ ನಗರಗದ್ದೆ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಪೊಲೀಸ್ ಕ್ವಾಟ್ರಸ್ ಗೆ ಸೇರಿದ್ದೆನ್ನಲಾದ 25,000 ಚದರಡಿ ಜಾಗವನ್ನು ಮಹಾಲಕ್ಷ್ಮೀ ಎಂಬುವವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇ- ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಮಲ್ಲೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಕೃಷ್ಣಮೂರ್ತಿ ಮೊದಲ ಆರೋಪಿಯಾಗಿದ್ದು, ಶಿವಮೊಗ್ಗದ ಬಿಜೆಪಿ ಪ್ರಮುಖ ಶ್ರೀನಾಥ್ ನಗರಗದ್ದೆ ಎರಡನೇ ಹಾಗೂ ಕೃಷ್ಣ ಮೂರನೇ ಆರೋಪಿ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಅಧ್ಯಕ್ಷರು ಸಹ ನಗರಗದ್ದೆ ಬಂಧನದ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.
