ಸಾಮಾಜಿಕ ಜಾಲತಾಣದ ಪೋಟೋ
ಶಿವಮೊಗ್ಗ, ಮಾ.30:
ಏಪ್ರಿಲ್ 15ರಿಂದ ನಡೆಯಲಿರುವ ಜನಗಣತಿ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನಾನಾ ಗೊಂದಲಗಳನ್ನು ಸೃಷ್ಟಿಸಿರುವ ಜೊತೆಗೆ ಅವರಲ್ಲೇ ಹಂಚಿಕೆ ಮಾಡುವ ಹೊಸ ಹೊಸ ವಿಧಾನಗಳನ್ನು ಮಾಡುತ್ತಿರುವುದು ಇಡೀ ಶಿಕ್ಷಕರ ವಲಯದಲ್ಲಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಶಾಲೆಯಲ್ಲಿ ನೀವು ಶೇಕಡ 50ರಷ್ಟು ಶಿಕ್ಷಕರು ಶಾಲೆಯಲ್ಲಿ ಇರಬೇಕು ಎನ್ನುವ ನಿಯಮಾವಳಿಯ ಮಾತನ್ನು ಸಿಆರ್ಪಿಗಳು ಹೇಳುತ್ತಿದ್ದು, ಜನಗಣತಿ ಹೆಸರಿನ ಮೇಲ್ವಿಚಾರಕರು, ಮತ್ತೊಂದೆಡೆ ಇದೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರಸ್ತುತ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನೇಮಿಸಿದ್ದಾರೆ. ಶಿಕ್ಷಕರೇನು ಬಹುಪಾತ್ರವಾದಿಗಳಾಗಿರಬೇಕಾ?

ಅಂತೆ ಆ ಶಿಕ್ಷಕರನ್ನು ಹೊರತುಪಡಿಸಿ ಶಾಲೆಯಲ್ಲಿ ಶೇಕಡ 50ರಷ್ಟು ಶಿಕ್ಷಕರ ಇರಬೇಕು ಎಂಬುವ ಆದೇಶವನ್ನು ಹೊರಡಿಸಿರುವ ಶಿವಮೊಗ್ಗದ ಶಿಕ್ಷಣ ಇಲಾಖೆಯ ಡಿಡಿಪಿಐ ಕಛೇರಿಯ ಮೂಲದ ಮಾಹಿತಿಯಾದರೂ ಏನು ಸರಿಯಾದ ಸಮರ್ಪಕವಾದ ಮಾಹಿತಿ ನೀಡದೆ ಶಿಕ್ಷಕರನ್ನು ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ, ಸರಿಯಾದ ಮಾಹಿತಿ ನೀಡದೆ ನೀವು ಇಲ್ಲಿ ಬನ್ನಿ ಅಲ್ಲಿ ಬನ್ನಿ ಎಂದು ಹೇಳುವುದು ಎಷ್ಟರಮಟ್ಟಿಗೆ ಶಿಕ್ಷಕರಿಗೆ ಸರಿಯಾಗಿ ತಲುಪಲು ಸಾಧ್ಯ ಅಲ್ಲಿರುವ ಸಿಆರ್ಪಿಗಳು, ಬಿ ಆರ್ ಪಿ ಗಳು ಅದೇ ಹೆಸರಲ್ಲಿ ಸುಮ್ಮನೆ ಕುಳಿತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಗಣತಿ ವ್ಯವಸ್ಥೆ ನೋಡಿಕೊಳ್ಳುವ ನೌಕರರು ಮಾಡುವುದಾದರೂ ಏನು?




ಪ್ರತಿಯೊಬ್ಬ ಶಿಕ್ಷಕರಿಗೆ ಸರಿಯಾದ ಮಾಹಿತಿಯನ್ನು ಮೊಬೈಲ್ ಮೂಲಕ ಕೊಡುವ ಜೊತೆಗೆ ನೇರವಾಗಿ ಅವರಿಗೆ ದೂರವಾಣಿ ಕರೆ ಮೂಲಕ ಅಥವಾ ಶಾಲೆಯಲ್ಲಿ ಸಂಪರ್ಕಿಸಿ ನೀಡಬೇಕು ಎಂಬುದು ಇಡೀ ರಾಜ್ಯದ ವ್ಯವಸ್ಥೆ ಅದನ್ನು ಬಿಟ್ಟು ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಹೊಸ ಬಗೆಯ ನಾಟಕ ಆಡುತ್ತಿರುವುದು ಏಕೆ ಎಂಬುದು ನೂರಾರು ಅನುಮಾನವನ್ನು ಸೃಷ್ಟಿಸುತ್ತದೆ. ಅದಕೆ ಪೂರಕವಾದ ತರಬೇತಿ ಮಾಹಿತಿಯನ್ನು ಸಖತ್ ಆಂಗ್ಲಭಾಷೆಯಲ್ಲಿ ಹೇಳಿದ್ದಾರೆ.
ಶಿಕ್ಷಕರು ಪಾಠ ಮಾಡೋದು ಬಿಟ್ಟು ಬೇರೆ ವಿಭಾಗದಲ್ಲಿ ಕಸ ಹೊಡೆಯೋದೇ ಬೆಸ್ಟ್ ಅಂತಿದಾರೆ ನಿಜವೇ?