ಶಿವಮೊಗ್ಗ: ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಾಣುವುದಕ್ಕೆ ಜಾಗತಿಕ ಮಟ್ಟದಲ್ಲಿ ನಡೆಯುವ ಸಮಸ್ಯೆಗಳು ಕಾರಣ ಎಂದು ಮೈತ್ರಿ ಮೈ ಜ್ಯೂವೆಲ್ ಸಿಇಒ ಸೆಂಥಿಲ್ ವೆಲನ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ 2026ರಲ್ಲಿ ಚಿನ್ನ ಮತ್ತು ಬೆಳ್ಳಿ ಅಪಾಯಗಳು, ಲಾಭಗಳು ಮತ್ತು ವಾಸ್ತವ ಮಾರುಕಟ್ಟೆ ಪ್ರವೃತ್ತಿ, ಭವಿಷ್ಯದ ದೃಷ್ಟಿಕೋನದ ಬಗ್ಗೆ ಮಾತನಾಡಿ,

ಯುದ್ಧ ಹಾಗೂ ಇನ್ನಿತರ ಕಾರಣಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದುಬ್ಬರದ ವ್ಯವಸ್ಥೆಗಳಲ್ಲಿ ಬದಲಾವಣೆಯು ಚಿನ್ನ, ಬೆಳ್ಳಿ ಹೆಚ್ಚಿನ ದರ ಆಗುವುದಕ್ಕೆ ಸಾಧ್ಯವಾಗಿದೆ. ಜನಸಾಮಾನ್ಯರು ಚಿನ್ನ ಮತ್ತು ಬೆಳ್ಳಿಯನ್ನು ಕೊಳ್ಳುವ ಸಾಮರ್ಥ್ಯ ಕುಂಠಿತಗೊಂಡಿದೆ. ಆದರೂ ಕೂಡ ಮದುವೆ, ಜನ್ಮದಿನ ಕಾರ್ಯಕ್ರಮಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬಹಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಚಿನ್ನ ಮತ್ತು ಬೆಳ್ಳಿಯ ದರಗಳು ಒಂದು ವಿಶೇಷ ಆಗಿರುವ ಸಂದರ್ಭದಲ್ಲಿ ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏರುಪೇರು ಆದ ಸಂದರ್ಭದಲ್ಲಿ ದರಗಳು ಹೆಚ್ಚು ಮತ್ತು ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಆದರೂ ಕೂಡ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಚಿನ್ನ ಬೆಳ್ಳಿ ತರಿಸುತ್ತಿದ್ದಾರೆ. ಅಮೆರಿಕ ದೇಶ ಚಿನ್ನ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ. ಆದರೆ ಭಾರತ ಏಳನೇ ಸ್ಥಾನವನ್ನು ಹೊಂದಿರತಕ್ಕದ್ದು ಕಾರಣ ಭಾರತೀಯ ನಾಗರಿಕರು ಚಿನ್ನಾಭರಣ ಪ್ರಿಯರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಡಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ. ಆದರೂ ಚಿನ್ನ ಯಾವಾಗಲೂ ಕೂಡ ಬೆಲೆಯುಳ್ಳ ವಸ್ತುವಾಗಿದೆ. ಆದ್ದರಿಂದ ಚಿನ್ನ ಮತ್ತು ಬೆಳ್ಳಿ ಒಂದು ಫ್ಯಾಶನ್ ಆಗಿ ಬೆಳೆದಿದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ್ ಮಾತನಾಡಿ, ಚಿನ್ನ ಒಂದು ಆಪತ್ಬಾಂಧವ ಇದ್ದಹಾಗೆ. ಒಂದು ಶಿಕ್ಷಣಕ್ಕಾಗಲಿ, ಒಂದು ಮನೆ ಕಟ್ಟಿಸಲು ಮತ್ತು ಯಾವುದೇ ಒಂದು ಕಷ್ಟದ ಪರಿಸ್ಥಿತಿಯಲ್ಲಿ ಚಿನ್ನ ತುಂಬಾ ಸಹಕಾರಿಯಾಗಲಿದೆ ಎಂದರು.
ರೋಟರಿ ಶ್ರೀಕಾಂತ್, ಮಹೇಶ್, ಕೇಶವಪ್ಪ, ಗಣೇಶ್, ಶ್ರೀನಿವಾಸ್ ಗೌಡ, ಗಂಗಪ್ಪ, ರಾಮೇಶ್ವರ, ಚಂದ್ರಶೇಖರಯ್ಯ, ಅರುಣ್ ದೀಕ್ಷಿತ್, ಬದರಿನಾಥ್, ಸಪ್ನ ಬದರಿನಾಥ್ ಮತ್ತಿತರರಿದ್ದರು.