ಶಿವಮೊಗ್ಗ: ಹೆಣ್ಣಿಗೆ ಧರ್ಮ ಇಲ್ಲ, ಜಾತಿಯಿಲ್ಲ, ಹೆಣ್ಣೇ ಒಂದು ಶಕ್ತಿ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡಗಳ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಪ್ರತಿಪಾದಿಸಿದರು.
ಹಿಂದುಳಿದ ಜನ ಜಾಗೃತಿ ವೇದಿಕೆಯ ಮಹಿಳಾ ಘಟಕವು ಇಂದು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಅಬಲೆಯಲ್ಲ, ಹೆಣ್ಣು ಶಕ್ತಿಶಾಲಿ. ಆದರೆ ವ್ಯವಸ್ಥೆಯೊಳಗಡೆ ಜಾತಿ, ಧರ್ಮದ ಹೆಸರಲ್ಲಿ ಹೆಣ್ಣನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ ಅವರು, ಅದಕ್ಕೆ ತಮ್ಮನ್ಮೇ ಉದಾಹರಿಸಿ ಮಾತನಾಡಿದರು.
ಹಲವಾರು ವ?ಗಳಿಂದ ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಅದರ ಆಧಾರದ ಮೇಲೆಯೇ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಕ್ಕೆ ಎರಡು ಭಾರಿ ಸ್ಪರ್ಧೆ ಮಾಡಲು ಬಯಸಿ ಟಿಕೆಟ್ ಆಕಾಂಕ್ಷಿ ಯಾದರೂ, ನಾನ್ನೊಬ್ಬಳು ಅಲ್ಪ ಸಂಖ್ಯಾತ ಅಲೆಮಾರಿ ಸಮುದಾ ಯದ ಜಾತಿಯವಳು ಎನ್ನುವ ಕಾರಣಕ್ಕೆ ಟಿಕೆಟ್ ಸಿಗಲಿಲ್ಲ. ಹಾಗಾದರೆ ಹೆಣ್ಣಿಗೆ ಜಾತಿಯಿದೆಯೇ? ಎಂದು ಪ್ರಶ್ನಿಸಿದ ಅವರು, ಹೆಣ್ಣಿಗೆ ಧರ್ಮ ಇಲ್ಲ, ಜಾತಿಯಿಲ್ಲ, ಹೆಣ್ಣೇ ಒಂದು ಶಕ್ತಿ ಎಂದು ಪ್ರತಿಪಾದಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎನ್ನುವುದು ಹೆಣ್ಣು ಮಕ್ಕಳಿಗೆ ಒಂದು ಹಬ್ಬ ದಿನ. ಆದರೆ ಈ ದಿನ ವೈಶಿ? ತೆ ಗೆ ಮಹಿಳೆಯರ ವಿರೋಚಿತ ಹೋರಾಟದ ಹಿನ್ನೆಲೆಯಿದೆ. ೯೦ ವ?ಗಳ ಹಿಂದೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರು ಕನಿ? ವೇತನವೂ ಸೇರಿ ಸಮಾನ ಅವಕಾಶಗಳಿಗಾಗಿ ನಡೆಸಿದ ಹೋರಾಟದ ನೆನಪಿಗಾಗಿ ಮಹಿಳಾ ದಿನಾಚರಣೆ ಅಚರಣೆಗೆ ಬಂದಿದೆ. ಈ ಹಿನ್ನಲೆಯಲ್ಲಿ ಅವತ್ತು ಮಹಿಳೆಯರ ಸಮಾನ ಅವಕಾಶಗಳಿಗೆ ಹೋರಾಟ ನಡೆಸಿದ ಮಹಿಳೆಯನ್ನು ನೆನಪಿಸುವ ಸಂದರ್ಭ ಇದಾಗಿದೆ ಎಂದರು.
ಮಹಿಳಾ ಸಮಾನತೆ ವಿಚಾರದಲ್ಲಿ ೧೨ನೇ ಶತಮಾನದ ವಚನ ಚಳವಳಿಯನ್ನು ಮರೆಯುವಂತಿಲ್ಲ. ಅವತ್ತೇ ಮಹಿಳೆಯರಿಗೂ ಸಮಾನ ಅವಕಾಶಗಳು ಸಿಗಬೇಕು, ವ್ಯವಸ್ಥೆಯಲ್ಲಿ ಪುರು?ರ? ಅವರಿಗೂ ಹಕ್ಕು ಇದೆ ಎಂದು ಪ್ರತಿಪಾದಿಸಿದ್ದ ಬಸವಣ್ಣನವರು ನಮ್ಮ ಮನೆದೇವರು ಆಗಬೇಕಿದೆ. ಅವರ ಆದರ್ಶಗಳನ್ನು ಜಾರಿಗೆ ತರಬೇಕಾದರೆ ಅವರಿಗೆ ಕಾನೂನುಆಗಬೇಕಿದೆ.ಹಾಗೆಯೇ ಮಹಿಳೆಯರಿಗೆ ಮೊದಲು ಮತದಾನದ ಹಕ್ಕು ಕೊಡಿಸಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಮಹಿಳೆಯರಿಗೆ ಶಿಕ್ಷಣ ಅವಕಾಶ ಕೊಡಿಸಿದರು. ಶಿಕ್ಷಣ ಅಂದಾಕ್ಷಣ ಈ ದೇಶದಲ್ಲಿ ಮೊದಲುನೆನಪಾಗುವ ಹೆಸರುಸಾವಿತ್ರಿಭಾಯಿ ಫುಲೆ ಅವರು. ಆ ಹೊತ್ತಿನ ಕಡು ಕ?ದ ಕಾಲದಲ್ಲಿ ಅವರು ಎಲ್ಲರಿಗೂ ಶಿಕ್ಷಣ ಸಿಗಬೇಕೆಂದು ಹೋರಾ ಡಿದರು.ಅವರ ಹೋರಾಟದ ಫಲವಾಗಿಯೇಇವತ್ತುಮಹಿಳೆ ವಿದ್ಯಾವಂತಳಾಗಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುವಂತಾಗಿದೆ ಎಂದು ಬಣ್ಣಿಸಿದರು.

ಹಿಂದುಳಿದ ಜನ ಜಾಗೃತಿ ವೇದಿಕೆಯ ಮಹಿಳಾ ಘಟಕದ ಸಂಚಾಲಕರಾದ ಎಸ್.ವಿ.ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಹಿಳಾಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಮುಖ್ಯ ಭಾ?ಣ ಮಾಡಿದರು. ಇದೇ ವೇಳೆ ಶ್ಲಾಘನೀಯ ಸೇವೆಗಾಗಿ ರಾ? ಪತಿಗಳ ಪದಕಕ್ಕೆ ಪಾತ್ರರಾದ ಪೋಲಿಸ್ ಇನ್ಸ್ ಪೆಕ್ಟರ್ ಶಕುಂತಲಾ ಹೆಚ್. ಕೆ. ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಸಹ್ಯಾದ್ರಿ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವೀರಮ್ಮ, ವಕೀಲರು ಹಾಗೂ ಎಪಿಸಿಆರ್ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಸರೋಜ ಪಿ. ಚಂಗೊಳ್ಳಿ, ವಾರ್ತಾ ವಾಚಕಿ ಸುಗುಣ ಸತೀಶ್, ನಿವೃತ್ತ ಶಿಕ್ಷಕಿ ಯಶೋದ ಕರಿಯಪ್ಪ, ಲೇಖಕಿ ನಂದಾ ಕವಯತ್ರಿ, ವಕೀಲರಾದ ಶೈನಿ ಮೇರಿ ಇದ್ದರು. ವರಲಕ್ಷ್ಮಿ ಪ್ರಕಾಶ್ ಸ್ವಾಗತಿಸಿದರು.