*ನಮ್ಮೂರು ಬಳಗದ ವತಿಯಿಂದ ನಗರದ ಕೋಟೆ ಶ್ರೀ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಅಂಗವಾಗಿ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಟಗರು ಕಾಳಗಕ್ಕೆ ಹೊರ ರಾಜ್ಯದಿಂದ ಹಾಗೂ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ರಾಜ್ಯದ್ಯಂತ ಆಗಮಿಸಿದ ಟಗರು ಮಾಲೀಕರಿಗೂ ಟಗರು ಅಭಿಮಾನಿಗಳಿಗೂ, ಕಾರ್ಯಕ್ರಮ ಯಶಸ್ವಿಯಾಗಲು

ಸಹಕರಿಸಿದ ಜಿಲ್ಲಾಡಳಿತಕ್ಕೂ, ಪೊಲೀಸ್ ಇಲಾಖೆಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೂ, 24 ಗಂಟೆಗಳ ಕಾಲ ನಡೆದ ಟಗರು ಕಾಳಗದ ಪಂದ್ಯವನ್ನು ವೀಕ್ಷಿಸಿದ ಎಲ್ಲಾ ಸಾರ್ವಜನಿಕರಿಗೂ, ವಿಶೇಷವಾಗಿ ಮಹಿಳೆಯರಿಗೂ ಮತ್ತು ಟಗರಿನ ಮಾಲೀಕರುಗಳಿಗೆ ಹಾಗೂ

ಸಾರ್ವಜನಿಕರಿಗೆ ದಾಸೋಹದ ವ್ಯವಸ್ಥೆಯನ್ನು ನಿರಂತರವಾಗಿ ತಲುಪಿಸಿದ ನಮ್ಮೂರ ಬಳಗದ ಸಂಚಾಲಕಗಳಿಗೂ, ರೋಚಕವಾದ ಕಾಳಗದ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ತೀರ್ಪುಗಾರರಿಗೂ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್ , ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕರಿ ಹೆಚ್ ಪಾಲಾಕ್ಷಿ ಐಡಿಯಲ್ ಗೋಪಿ, ಸಿ ಎಚ್ ಮಾಲ್ತೇಶ್ ಸಿ ಗಿರೀಶ್ ,ಚಂದ್ರುಗೆಡ್ಡೆ ರವಿ, ಕೆ.ಆರ್. ಸುರೇಶ್ ಸೇರಿದಂತೆ ಎಲ್ಲ ಸಂಚಾಲಕರುಗಳು ಅನಂತ ಅನಂತ ಧನ್ಯವಾದಗಳು ತಿಳಿಸಿದ್ದಾರೆ*