ಶಿವಮೊಗ್ಗ:- ಸಮಾಜ ಪರಿವರ್ತನೆಗೆ ಹಾಗೂ ಅಸ್ಪೃಶ್ಯತೆ ಹೋಗಲಾಡಿಸಲು ಅಂಬೇಡ್ಕರ್ ತಮ್ಮ ಇಡೀ ಜೀವನವಿಡಿ ನೋವನ್ನು ಅನುಭವಿಸಿದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಕರ್ನಾಟ ಸಂಸ್ಕೃತ ವಿದ್ಯಾಲಯ, ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಬೆಂಗಳೂರು ಮತ್ತು ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಮಹಾವಿದ್ಯಾಲಯ ಬೆಕ್ಕಿನ ಕಲ್ಮಠ ಇವರ ಸಂಯುಕ್ತಾ ಶ್ರಯದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಗುರುಬಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬದುಕು ಹಾಗೂ ವಿಚಾರ ಧಾರೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ವಿಶ್ವದ ಎಲ್ಲಾ ದೇಶಗಳಿಗೆ ಮಾದರಿಯಾದ ಸಂವಿಧಾನವನ್ನು ಭಾರತಕ್ಕೆ ನೀಡುವಲ್ಲಿ ಮಹತ್ವ ಪಾತ್ರ ವಹಿಸಿದ್ದಾರೆ. ಅವರು ನೀಡಿದ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ ಎಂದರು.
ಹಿಂದೂ ಧರ್ಮದಲ್ಲಿನ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಅವರು, ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ಇದೇ ಸಂಸ್ಕೃತಿಯಲ್ಲಿ ಹುಟ್ಟಿದ ಬೌದ್ಧ ಧರ್ಮಕ್ಕೆ ಸೇರಿದರು ಎಂದರು.
ಸಂಸ್ಕೃತ ವಿಶ್ವ ವಿದ್ಯಾಲಯ ಅಂಬೇಡ್ಕರ್ ವಿಚಾರಧಾರೆ ಉಪನ್ಯಾಸವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತ ಮೃತಭಾಷೆಯಲ್ಲ ಅದು ಅಮೃತ ಭಾಷೆ. ಇಡೀ ಸಮಾಜವನ್ನು ಒಂದು ಮಾಡುವ ಚಿಂತನೆ ಸಂಸ್ಕೃತದಲ್ಲಿದೆ. ಎಲ್ಲರೂ ಒಂದು ಹಾಗೂ ಎಲ್ಲರೂ ಸುಖವಾಗಿ ಇರಬೇಕು ಎಂಬ ಮೂಲತತ್ವವನ್ನು ಈ ಭಾಷೆ ಹೊಂದಿದೆ ಎಂದರು.
ಜೀವನದಲ್ಲಿ ಸಂಸ್ಕೃತ ವಿದ್ವತ್ ಅಳವಡಿಸಿಕೊಂಡರೆ eನಿ ಯಾಗುತ್ತಾನೆ. ಇಂದು ವಿಶ್ವದ ಅನೇಕ ದೇಶಗಳಲ್ಲಿ ಸಂಸ್ಕೃತ ಭಾಷೆಯ ಪ್ರಾಮುಖ್ಯತೆ ಅರಿತು ಮಕ್ಕಳಿಗೆ ಸಂಸ್ಕೃತ ಕಲಿಸಲಾಗುತ್ತಿದೆ. ಸಂಸ್ಕೃತ ಭಾಷಯ ಕೊಡುಗೆ ಅಪಾರವಾಗಿದ್ದು, ಅದರ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಕರೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಡಾ. ಸಿ. ರೇಣು ಕಾರಾಧ್ಯ ಪ್ರಾಸ್ತವಿಕವಾಗಿ ಮಾನತಾಡಿ, ಬೆಕ್ಕಿನ ಕಲ್ಮಠದಲ್ಲಿ ೧೯೮೩ರಿಂದ ಸಂಸ್ಕೃತ ಪಾಠ ಶಾಲೆ ಆರಂಭಿಸಿ ಈ ಭಾಗದ ಸಂಸ್ಕೃತ ಕಲಿಕೆಯ ಪ್ರಮುಖ ಕೇಂದ್ರವಾಗಿ ಬೆಳೆಸಲಾಗಿದೆ. ಮಠದ ಶ್ರೀಗಳ ಪ್ರಯತ್ನದಿಂದ ಸಂಸ್ಕೃತ ಸೇರಿದಂತೆ ಶೈಕ್ಷಣಕ ಸಂಸ್ಥೆಗಳ ಸ್ಥಾಪಿಸಿ eನ ದಾಸೋಹ ಮಾಡಲಾಗುತ್ತಿದೆ ಎಂದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಕೃತ ವಿವಿ ಪ್ರಸರಾಂಗ ಸಂಯೋಜನಾದಿಕಾರಿ ಡಾ. ಗೋವಿಂದ ಅಧ್ಯಕ್ಷತೆ ವಹಿಸಿದ್ದರು. ಡಾ. ಸಮಾಜ ಕಲ್ಯಾಣ ಇಲಾಖೆ ನಿಲಯ ಮೇಲ್ವಿಚರಣಾದಿಕಾರಿ ವಿನಯಾ ಬಿ.ಎಸ್, ಡಯಟ್ ನಿವೃತ್ತ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ, ಉಪನ್ಯಾಸಕ ಚಂದ್ರಶೇಖರಯ್ಯ, ಲೋಕೇಶಪ್ಪ, ಎಸ್.ಜೆ.ಬಿ ವಿದ್ಯಾಪೀಠದ ಕಾರ್ಯದರ್ಶಿ ಶಾಂತವೀರಪ್ಪ ಸಿ.ವಿ, ನಿರ್ದೇಶಕ ವ್ಯೋಮಕೇಶಾರಾಧ್ಯ ಉಪಸ್ಥಿತರಿದ್ದರು. ಡಾ. ಕಾವ್ಯ ಸ್ವಾಗತಿಸಿದರು.