ಸಾಗರ : ಸಾಗರ ಮಾರಿಕಾಂಬಾ ದೇವಸ್ಥಾನ ಇತಿಹಾಸ ಸೃಷ್ಟಿ ಮಾಡಿದೆ. ಶಾಸಕ ಬೇಳೂರು ನೇತೃತ್ವದಲ್ಲಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆಯಾಗಿದ್ದು ಎಲ್ಲರ ಪ್ರಶಂಸೆಗೂ ನೀವುಗಳು ಪಾತ್ರವಾಗಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅವರು ಮಂಗಳವಾರ ಮಾರಿಕಾಂಬ ದೇವಿಯ ದರ್ಶನ ಪಡೆದು ನಗರಸಭೆ ಆವರಣದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಜಾತ್ರೆ ಎನ್ನುವುದು ಸಂಭ್ರಮದ ಸಂಕೇತ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ದೇವಿಗೆ ನಾವೇನು ಸೇವೆ ಮಾಡಿದ್ದೇವೆ ಎನ್ನುವುದು ಮುಖ್ಯ. ಜಾತ್ರೆ ಸಂದರ್ಭದಲ್ಲಿ ಯಾವುದೆ ಸಮಸ್ಯೆ ಆಗದಂತೆ ಎಲ್ಲ ಕಾರ್ಯಚಟುವಟಿಕೆ ನಡೆದಿದೆ. ಜಾತ್ರೆಯಲ್ಲಿ ವಿವಿಧ ಆಟಿಕೆಗಳು ಜನರನ್ನು ಆಕರ್ಷಣೆ ಮಾಡಿದ್ದು, ಅಮ್ಮನವರ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನರು ಬಂದು ಸೇರಿದ್ದು ಇತಿಹಾಸ ನಿರ್ಮಿಸಿದೆ. ಈ ಬಾರಿ ಸಾಗರ ಜಾತ್ರೆಯಲ್ಲಿ ವಿಶೇಷವಾಗಿ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸಿದ್ದು ನನಗೆ ತೀರ ಸಂತೋಷ ತಂದಿದೆ. ಜನಸಾಮಾನ್ಯರೂ ಹೆಲಿಕ್ಯಾಪ್ಟರ್ ಹತ್ತಲು ಅವಕಾಶ ಕಲ್ಪಿಸಿದಂತೆ ಆಗಿದೆ ಎಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದ ಶಾಸಕನಾಗಿ, ಸಮಿತಿಯ ಗೌರವಾಧ್ಯಕ್ಷನಾಗಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಬೇಕು ಎನ್ನುವ ನನ್ನ ಅಭಿಲಾಷೆ ಈಡೇರಿದೆ. ಈ ಬಾರಿ ಹಿಂದಿನ ಎಲ್ಲ ವರ್ಷಗಳಿಗಿಂತ ದಾಖಲೆ ಪ್ರಮಾಣದಲ್ಲಿ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ, ಜಾತ್ರೆಂiiನ್ನು ಚೆನ್ನಾಗಿ ನಡೆಸಿ ಎಂದು ಸಲಹೆ ನೀಡಿದ್ದೇನೆ. ಜನರಿಗೆ ತೊಂದರೆ ಆಗಬಾರದು ಎಂದು ತಿಳಿಸಿದ್ದೇನೆಯೆ ವಿನಃ, ಸಮಿತಿಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇದು ಜನರ ಜಾತ್ರೆ, ಊರಿನ ಜಾತ್ರೆ, ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿದ್ದೇವೆ ಎಂದು ಹೇಳಿದರು.

ಪ್ರತಿದಿನ ೨೦ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ ಎಲ್ಲವೂ ಶಿಸ್ತುಬದ್ದವಾಗಿ ನಡೆದಿದೆ. ಎಲ್ಲಾ ಸಮಿತಿ ಸದಸ್ಯರು ಅರ್ಹನಿಶಿ ಕೆಲಸ ಮಾಡಿದ್ದಾರೆ. ಹೆಲಿ ಟೂರಿಸಂ, ಗಣಪತಿ ಕೆರೆಯಲ್ಲಿ ಬೋಟಿಂಗ್ ಎಲ್ಲವೂ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರಮುಖವಾಗಿದೆ. ಜಾತ್ರೆ ಯಶಸ್ಸು ಕಾಣ ಬೇಕಾದರೆ ಎಲ್ಲರ ಸಹಕಾರ ಮುಖ್ಯ. ಸಾಗರದ ಜಾತ್ರೆ ಯಶಸ್ಸಿನ ಬಗ್ಗೆ ರಾಜ್ಯದಾದ್ಯಂತ ಸುದ್ದಿಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿದರು. ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಟಾನದ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟಾ, ಸಮಿತಿ ಸಂಚಾಲಕರಾದ ವಿನಾಯಕ ಗುಡಿಗಾರ್, ಪುರುಷೋತ್ತಮ, ಆರ್. ಚಂದ್ರು, ರವಿನಾಯ್ಡು, ಭಾಸ್ಕರ ನಾಯ್ಕ್, ಗಣೇಶ್, ಬಸವರಾಜ್, ಜಯರಾಮ್, ಕೆ.ಎಚ್.ಮಂಜುನಾಥ್, ಜಯಂತಿ ಗಣೇಶ್, ತರಾಮೂರ್ತಿ, ತಾರಾಮೂರ್ತಿ, ಬಾಲಕೃಷ್ಣ ಗುಳೇದ್, ಕೆ.ಪಿ.ನವೀನ್, ಚಂದ್ರಕಾಂತ ಜಿ., ಸಂತೋಷ್ ಆರ್. ಶೇಟ್, ರಾಮಚಂದ್ರ, ಲೋಕೇಶ ಕುಮಾರ್, ಗಂಗಾಧರ ಜಂಬಿಗೆ, ಆರ್.ಎಂ.ನಾಗರಾಜ್, ಉಮೇಶ್ ಚೌಟಗಿ, ಅಶೋಕ್, ಶಶಿಕಾಂತ್ ಎಂ.ಎಸ್., ಪಾಂಡುರಂಗ ಟಿ.ವಿ., ಮೋಹನ್, ಬಸವರಾಜ್ ಜಿ., ರಾಜಶೇಖರ್, ನಾರಾಯಣ ಎನ್., ವೀರೇಂದ್ರ, ಡಿ.ಎಸ್.ಸತ್ಯನಾರಾಯಣ, ಎಚ್.ಎಲ್.ಶ್ರೀಧರ್, ಟಿ.ನಾಗಪ್ಪ, ಸೋಮಶೇಖರ್, ಗಣೇಶ್ ಶೇಟ್ ಇನ್ನಿತರರು ಹಾಜರಿದ್ದರು.
ನಂತರ ಶಿಯಾನ್ ಪಂಚಪ್ಪ ನೇತೃತ್ವದ ಸಾಗರ ಕರಾಟೆ ಅಸೋಶಿಯೇಷನ್ನಿಂದ ಕರಾಟೆ ಪ್ರದರ್ಶನ, ಶಿವಕುಮಾರ ಮಹಾಂತ ಮತ್ತು ಸಂಗಡಿಗರಿಂದ ಸುಗಮ ಸಂಗೀತ, ಸ್ಪಂದನ ತಂಡದಿಂದ ಕೋಲಾಟ, ಮೆಲ್ವಿನ್ ಈವೆಂಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಬುಧವಾರ ಜನ ಸಾಗರ : ಮಾರಿಕಾಂಬಾ ದೇವಿ ಜಾತ್ರೆಯ ಕೊನೆಯ ದಿನವಾದ ಬುಧವಾರ ಅಮ್ಮನವರ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಮಧ್ಯಾಹ್ನ ೩ ಗಂಟೆಯ ನಂತರ ಯಾವುದೇ ರೀತಿಯ ಪಾಸ್ಗೆ ಅವಕಾಶ ಇಲ್ಲ ಎಂದು ಪೊಲೀಸ್ ಇಲಾಖೆ ಮತ್ತು ಸಮಿತಿ ಮಂಗಳವಾರವೆ ಘೋಷಣೆ ಮಾಡಿದ್ದರಿಂದ ಜನರು ಬೆಳಿಗ್ಗೆಯಿಂದಲೆ ಪಾಶ್ ಹಿಡಿದು ಅಮ್ಮನವರ ದರ್ಶನ ಪಡೆದರು. ವಧ್ಯಾಹ್ನ ೩ರನಂತರ ಒಂದೆ ಸರದಿಯಲ್ಲಿ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಯಿತು