ಶಿವಮೊಗ್ಗ : ನಗರದ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಎಸ್ಕೆಎಂ ಫ್ಲಾಜಾ(ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್)ಮಳಿಗೆ ಇರುವ ಕಟ್ಟಡವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ರಿಟ್ ಫಿಟಿಷನ್ ಸಂಖ್ಯೆ ೪೦೯೩/೨೦೧೭ ತೀರ್ಪಿನಂತೆ ಈ ಕಟ್ಟಡ ಮಹಾನಗರ ಪಾಲಿಕೆ ಆಸ್ತಿ ಆಗಿದ್ದು ಬುಧವಾರ ಸಂಜೆ ಪಾಲಿಕೆವತಿಯಿಂದ ಆ ಕಟ್ಟಡಕ್ಕೆ ಫ್ಲೆಕ್ಸ್ ಅಳವಡಿಸಲಾಗಿದ್ದು, ಇದು ಪಾಲಿಕೆ ಸ್ವತ್ತು ನಮೂದಿಸಲಾಗಿದೆ. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮಳಿಗೆ ತೆರವುಗೊಳಿಸುವಂತೆ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ಗೆ ಮಹಾನಗರ ಪಾಲಿಕೆ ನೋಟೀಸು ಜಾರಿಗೊಳಿಸಿದ್ದು, ತೆರವಿಗೆ ೨ ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ