ದೇವಿಯ ದರ್ಶನಕ್ಕೆ ವಿಪರೀತ ಅಡ್ಡಿಪಡಿಸುತ್ತಿರುವ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಬಿಜೆಪಿ ಪ್ರಮುಖರು ಸ್ಥಳದಲ್ಲಿಯೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದಿಕ್ಕಾರ ಕೂಗಿದರು. ಸಾಗರದ ಜಾತ್ರೆಯ ಇತಿಹಾಸದಲ್ಲಿ ಇಂತಹ ಪ್ರತಿಭಟನೆಗಳು ನಡೆದಿರಲಿಲ್ಲ.ಜಾತ್ರೆಯಲ್ಲಿ ರಾಜಕೀಯ ಬಿನ್ನಮತ ಇರುತ್ತಿರಲಿಲ್ಲ.ಆದರೇ ಈ ಭಾರಿ ಮಾರಿಕಾಂಬಾ ಸಮಿತಿಯ ಜಾತ್ರಾ ಸಮಿತಿಯಲ್ಲಿ ಬಿಜೆಪಿ ಪ್ರಮುಖರನ್ನು ಕಿತ್ತೊಗೆಯಬೇಕು ಎಂದು ಶಾಸಕರು ತಾಕೀತು ಮಾಡಿದಾಗಿನಿಂದ ಬೂದಿಮುಚ್ಚಿದ ಕೆಂಡದಂತಿತ್ತು. ಸಾಗರ ಪೇಟೆಯಲ್ಲಿ ಪ್ರಚಾರದ ಸನ್ನಿಯಂತೆ ನಾಯಿಕೊಡೆಗಳಂತೆ ಸಾಗರದ ನಾಗರಿಕರು ನಾಚಿಕೊಳ್ಳುವಂತೆ ವ್ಯಾಪಿಸಿಕೊಂಡಿರುವ ಪ್ಲೆಕ್ಸ್ ಹಾವಳಿಯಿಂದ ಬಹುತೇಕ ಮುಖಂಡರುಗಳು ಮನದೊಳಗೆ ಆಕ್ರೋಶಗೊಂಡಿದ್ದರು.

ನಗರಾಡಳಿತಕ್ಕೆ ಕನಿಷ್ಠ ಪ್ಲೆಕ್ಸ್ ನೀತಿಯಿಲ್ಲವೇ?ಎಂದು ಪ್ರಶ್ನಿಸುತ್ತಿದ್ದರು.ಅದರಲ್ಲೂ ಪ್ಲೆಕ್ಸ್ಗಳ ಪಿತಾಮಹಾನೆಂದೇ ಪ್ರಖ್ಯಾತರಾಗಿರುವ ಶಾಸಕ ಬೇಳೂರು ಬಾವಚಿತ್ರ ಹಾಕಿಕೊಂಡು ತಮ್ಮದೊಂದು ಪ್ಲೆಕ್ಸ್ ಹಾಕಿದರೇ ಅಧಿಕಾರಿಗಳು ಮೌನವಹಿಸು ತ್ತಾರೆಂಬ ಬುದ್ದಿವಂತಿಕೆ ಕುರಿತು ಚರ್ಚೆಯಾಗುತ್ತಿದೆ.
ನಗರಸಭೆ ಮಾಜಿ ಅಧ್ಯಕ್ಷ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಮಾಜಿ ಸದಸ್ಯ ಆರ್. ಶ್ರೀನಿವಾಸ್ ಇತರರು ಪೊಲೀಸರು ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಮ್ಮನವರ ದರ್ಶನಕ್ಕೂ ಅವಕಾಶ ಕೊಡದಂತೆ ಅವರನ್ನು ತಡೆಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕ ಪ್ರಸಾದ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.