ಭದ್ರಾವತಿ : ನಗರದ ಬೊಮ್ಮನಕಟ್ಟೆ ಗ್ರಾಮದಲ್ಲಿ ಹುಲ್ಲಿನ ಬವಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ೮ ಕೆಜಿ ೬೦ ಗ್ರಾಂ ತೂಕದ ಗಾಂಜಾವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೇಪರ್ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ೪,೦೩,೦೦೦ ರೂಗಳ ಮೌಲ್ಯದ ೮ ಕೆಜಿ ೬೦ ಗ್ರಾಂ ತೂಕದ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡು ಆರೋಪಿ ಅಬ್ದುಲ್ ಖದ್ದೂಸ್ನನ್ನು ಬಂದಿಸಿದ್ದಾರೆ.
ಆರೋಪಿ ವಿರುದ್ಧ ಠಾಣಾ ಅಪರಾಧ ಸಂಖ್ಯೆ ೦೦೧೬/೨೦೨೬ ಕಲಂ – ೮(ಛಿ),೨೦(b) (ii) ಃ) ಓಆPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.