ಶಿವಮೊಗ್ಗ,ಜ.೨೬: ಇಲ್ಲಿನ ವಿನೋಬನಗರ ಮೇದಾರ ಕೇರಿ ೨ನೇ ತಿರುವಿನ ಷಡಾಕ್ಷರಪ್ಪ ಅವರು ನಿಧನರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗೋವಾ ವಿಮೋಚಾನ ಹೋರಾಟಗಾರರು ಆಗಿದ್ದ ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಅವರಿಗೆ ೮೯ ವರ್ಷ ವಯಸ್ಸಾಗಿತ್ತು.
ಇಂದು ಮದ್ಯಾಹ್ನ ವೀರಶೈವ ಹಿಂದೂ ರುದ್ರಭೂಮಿಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು.
ನ್ಯಾಮತಿ ಮೂಲದವರಾದ ಅವರು ಪತ್ನಿ, ಸಹೋದರ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಸಂತಾಪ: ತುಂಗಾ ತರಂಗ ಬಳಗ, ವೀರಶೈವ ಸಮಾಜ ಸಂತಾಪ ಸೂಚಿಸಿದೆ.