ಶಿವಮೊಗ್ಗ, ಜ.24:
ನಮ್ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಸಂಸ್ಥೆಯಿಂದ ಗಣರಾಜ್ಯೋತ್ಸವದಂದು ಸ್ಕೇಟಿಂಗ್ ಮ್ಯಾರಥಾನ್ ಆಯೋಜಿಸಿದ್ದು, ನಮ್ಮ ಸಂಸ್ಥೆ ಹಾಗೂ ಇತರ ಸಂಸ್ಥೆಗಳ ಎಲ್ಲಾ ಸ್ಕೇಟಿಂಗ್ ಪಟುಗಳು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ.
ಬೆಳಗ್ಗೆ 10 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಿಂದ ಹೊರಟು ಉಷಾ ನರ್ಸಿಂಗ್ ಹೋಮ್, ಲಕ್ಷ್ಮಿ ಚಿತ್ರಮಂದಿರ ಬಳಿಯ ಫ್ರೀಡಂ ಪಾರ್ಕ್ ವರೆಗೆ ಸ್ಕೇಟಿಂಗ್ ಮ್ಯಾರಥಾನ್ ಹಾಗೂ ಗಣರಾಜ್ಯೋತ್ಸವದ ಘೋಷಣೆಯ ಜೊತೆಗೆ ಅಪಾರ ಸಂಖ್ಯೆಯ ಸ್ಕೇಟಿಂಗ್ ಪಟಗಳು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರನ್ನು ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಸಂಸ್ಥೆ ಸ್ವಾಗತಿಸಿದೆ.