ಶಿವಮೊಗ್ಗ, ಜನವರಿ 17: : ಮಿಲಿಟರಿ ಕ್ಯಾಂಟೀನ್ ಮತ್ತು ಲೆಕ್ಕಪತ್ರಗಳ ಅನುಭವವುಳ್ಳ 64 ವರ್ಷ ವಯಸ್ಸಿನೊಳಗಿನ ನಿವೃತ್ತ ರಕ್ಷಣಾ ಅಧಿಕಾರಿ (ಡಿಫೆನ್ಸ್ ಆಫೀರ್ಸ್) ಗಳಿಂದ ಒಪ್ಪಂದದ ಮೇರೆಗೆ ವಿರಾಜಪೇಟೆ ಮತ್ತು ಕೋಲಾರ ಈ ಸ್ಥಳಗಳಲ್ಲಿ ಕ್ಯಾಂಟೀನ್ ಮೇನೇಜರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಜ.20 ರೊಳಗಾಗಿ Canteen Officer, Golden Palm Canteen cell, c/o HQ K&K Sub Area, Cubbon Road, Bengaluru – 560001”” ಎಂಬ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಮಿಂಚAಚೆ gpccellkksa@gmail.com ಮೂಲಕ ಕಳುಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಹತೆ, ಅರ್ಜಿ ನಮೂನೆಗಳಿಗಾಗಿ gpcscblr.co.in GPC ಎಂಬ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.
———————————–