ಸಾಗರ : ರಾಜ್ಯದ ಅತಿದೊಡ್ಡ ಜಾತ್ರೆ ಎಂಬ ಪ್ರಸಿದ್ದಿ ಹೊಂದಿರುವ ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆ. ೩ರಿಂದ ಫೆ. ೧೧ರವರೆಗೆ ನಡೆಯಲಿದ್ದು ಅಗತ್ಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.
ಶ್ರೀ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿಗೆ ಎರಡು ಎಳೆಯ ಬಂಗಾರ ಸರವನ್ನು ಮಾಡಿಸುವ ಕುರಿತು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ೨೦೨೩ರ ಜಾತ್ರೆ ಸಂದರ್ಭದಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಗೆ ಭಕ್ತರು ಹಾಗೂ ಚಿನ್ನಬೆಳ್ಳಿ ಅಂಗಡಿಯ ಮಾಲೀಕರು ನೀಡಿದ ದಾನದ ಬಂಗಾರ ಸುಮಾರು ೬೭೦ ಗ್ರಾಮ್ ಇರುತ್ತದೆ. ಇದರಿಂದ ದೇವಿಗೆ ಅಷ್ಟಪಟ್ಟಿ ಹಾಗೂ ತಾಳಿ ಗುಂಡು ಮಾಡಿಸಲಾಗಿತ್ತು.

ಈ ಜಾತ್ರೆ ಸಂದರ್ಭದಲ್ಲಿ ಚಿನ್ನಬೆಳ್ಳಿ ವರ್ತಕರು ಮತ್ತು ಭಕ್ತಾಧಿಗಳು ಹೆಚ್ಚಿನ ರೀತಿಯಲ್ಲಿ ಶ್ರೀದೇವಿಗೆ ಬಂಗಾರವನ್ನು ಕಾಣಿಕೆ ರೂಪದಲ್ಲಿ ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಪ್ರತಿಷ್ಟಾನದ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.