ಶಿವಮೊಗ್ಗ, ಜನವರಿ 13 ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ’ ನಾಟಕೋತ್ಸವ -2026 ಕಾರ್ಯಕ್ರಮವನ್ನು ಆಯೋಜಿಸಿದೆ.

ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ಜ.14 ರಂದು ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ, ಜ.15 ರಂದು ಶಕೀಲ್ ಅಹ್ಮದ್ ನಿರ್ದೇಶನದ ಕೊಡಲ್ಲ ಅಂದ್ರೆ ಕೊಡಲ್ಲ, ಜ. 16 ರಂದು ಪ್ರಕಾಶ ಗರುಡ ನಿರ್ದೇಶನದ ಕಂದಗಲ್ಲ ಭಾರತ, ಜ. 17 ರಂದು ಜಿ.ಪರಶುರಾಮ್ ಸೂರನಕದ್ದೆ ನಿರ್ದೇಶನದ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ, ಜ. 18 ರಂದು ಮಹಾತ್ಮರ ಬರುವಿಗಾಗಿ ಹಾಗೂ ಜ. 19 ರಂದು ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ಗುಲಾಮನ ಸ್ವಾತಂತ್ರö್ಯ ಯಾತ್ರೆ ಎಂಬ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ.

ಟಿಕೆಟ್ ದರ ಒಂದು ನಾಟಕಕ್ಕೆ ರೂ.30/-. ಕಲಾಭಿಮಾನಿ ಈ ನಾಟಕೋತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.