
ಶಿವಮೊಗ್ಗ, ಜ.11:
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳ ಸಕಾಲದಲ್ಲಿ ಸ್ಪಂದಿಸದಿದ್ದರೆ, ಭಾರಿ ಅವಗಡವಾಗುತ್ತಿತ್ತು.

ಶಿವಮೊಗ್ಗ ಸುದ್ದಿ ಜಗತ್ತಿನಲ್ಲಿ ಹರಿದಾಡದ ಈ ಸುದ್ದಿ ತುಂಗಾತಂಗ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಪತ್ರಿಕೆಯ ಓದುಗರೊಬ್ಬರು ನೀಡಿದ ಮಾಹಿತಿ ಹಾಗೂ ಚಿತ್ರಗಳೇ ಕಾರಣ.




ಬೆಳಗಿನ ಜಾವ ಖಾಸಗಿ ಬಸ್ ನಿಲ್ದಾಣದ ಚಪ್ಪಲಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದೆ. ಈ ಸಂದರ್ಭದಲ್ಲಿ ಹೊರಗಿದ್ದ ಕಸ ಸಹ ಹತ್ತಿಕೊಂಡು ಉರಿದಿದೆ.
ಕತ್ತಲು ಬೇರೆ, ಬಾರೀ ಚಳಿಯ ಜೊತೆಗೆ ಜನ ಗಾಬರಿಯಾಗಿದ್ದಾರೆ. ಅದೂ ದೂರದ ಊರಿಗೆ ಹೋಗಲು ಸಿದ್ದವಾಗಿದ್ದ ಎಷ್ಟೋ ಜನ ಭಯಭೀತರಾಗಿದ್ದು, ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಕಾಲದಲ್ಲಿ ಸ್ಪಂದಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ.

ಚಪ್ಪಲಿ ಅಂಗಡಿಯ ಬಹಳಷ್ಟು ವಸ್ತುಗಳು ಹುಟ್ಟು ಹೋಗಿವೆ ಎಂದು ಹೇಳಲಾಗುತ್ತದೆ ಮಿಕ್ಕಿದ ಮಾಹಿತಿಗಳು ಇನ್ನು ಮೇಲೆಷ್ಟೇ ಹೊರಬರಬೇಕಿದೆ.