ಶಿವಮೊಗ್ಗ: ನಗರದ ಮಥುರಾ ಪ್ಯಾರಾಡೈಸ್ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 16ರಿಂದ 18ರವರೆಗೆ ಮಕರ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಆಟ, ಊಟ, ಹಾಡು, ಕೋಲಾಟ, ರಸಪ್ರಶ್ನೆ, ಬಹುಮಾನ, ಅದೃಷ್ಟವಂತರಿಗೆ ಬೆಳ್ಳಿ ನಾಣ್ಯ ಉಡುಗೊರೆ ಸಹ ನೀಡಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ವೇದಿಕೆ, ಸಾಹಸ ಮತ್ತು ಸಂಸ್ಕೃತಿ ವೇದಿಕೆ, ನಮ್ಮ ಕನಸಿನ ಶಿವಮೊಗ್ಗ, ಬೈಕ್ ಕ್ಲಬ್, ಮಲೆನಾಡು ಇತಿಹಾಸ ವೇದಿಕೆ ಸಹಯೋಗದಲ್ಲಿ ಸಂಕ್ರಾಂತಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ. ಹಬ್ಬದ ವಿಶೇಷ ಊಟ ಸೇವಿಸಲು ನೋಂದಣಿ ಮಾಡುವುದಕ್ಕಾಗಿ 9916334736 ಅಥವಾ 7892426584 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದ್ದಾರೆ..