ಶಿವಮೊಗ್ಗ,ಡಿ.18:
ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆಯನೂರಿನ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನವು ಡಿ.19 ರ ನಾಳೆ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಟೆಕ್ಸಾಸ್ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಸ್ಥಳೀಯ ಮಟ್ಟದ ಸ್ಪರ್ಧೆಯ ಪ್ರಯುಕ್ತ ಕಿರು ಪರೀಕ್ಷೆ ನಡೆಸಿ, ಪ್ರತಿ ಶಾಲೆಯಿಂದ ಆರು ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಮಕ್ಕಳೊಂದಿಗೆ ಶಾಲೆಯಿಂದ ಒಬ್ಬ ಶಿಕ್ಷಕರು ನಾಳೆ ಬೆಳಿಗ್ಗೆ 9:00ಗಂಟೆ 30 ನಿಮಿಷಕ್ಕೆ ಅಂಬೇಡ್ಕರ್ ಭವನ, ಶಿವಮೊಗ್ಗ ಇಲ್ಲಿ ಹಾಜರಿರಲು ತಿಳಿಸಲಾಗಿದೆ.

ಆದೇಶ ಪ್ರತಿ ಹಾಗೂ ಶಾಲೆಗಳ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಹೊಂದಿಸಲಾಗಿದೆ ಎಂದು ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ
ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಸಂಯೋಜಕ ಶಿವರಾಜ್ ಗೊರನಾಳ ತಿಳಿಸಿದ್ದಾರೆ.