ಶಿವಮೊಗ್ಗ : ಡಿ.15
ಹಾಲಿ ಗ್ರಾಮಾಂತರ ಠಾಣೆಯ ಸಿಪಿಐ ಅಗಿರುವ ರಾಘವೇಂದ್ರ ಕಾಂಡಿಕೆರಿಗೆ ಭದ್ರಾವತಿಯ ನ್ಯೂಟನ್ ಠಾಣೆ ಹಾಗೂ ಹಳೇನಗರ ಪೋಲಿಸ್ ಠಾಣೆಗಳಲ್ಲಿ ಪಿಐ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ

ಕೊಲೆ ಪ್ರಕರಣ ಎಂಟು ಕೊಲೆ ಅರೋಪಿಗಳಿಗೆ ಹಾಗೂ ಪೋಕ್ಸೋ ಪ್ರಕರಣ, ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಅರೋಪಿಗಳಿಗೆ ಒಟ್ಟಾರೆ ನಾಲ್ಕು ಪ್ರಕರಣಗಳಲ್ಲಿ ತನಿಖಾಧಿಕಾರಿಗಳಾಗಿ ಉತ್ತಮ ಕರ್ತವ್ಯ ನಿರ್ವಹಿಸಿ

ಅರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಮಾಡಿ ನೊಂದವರಿಗೆ ನ್ಯಾಯ ದೊರಕಿಸಿ ಕೊಟ್ಟು ಉತ್ತಮ ಕರ್ತವ್ಯ ನಿರ್ವಹಿಸಿದ ಇವರಿಗೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಎಸ್ಪಿ ಮಿಥುನ್ ಕುಮಾರ್ ರವರು ಅತ್ಮಿಯವಾಗಿ ಅಂಭಿನಂದಿಸಿ ಮುಂದಿನ ದಿನಗಳಲ್ಲಿಯೂ ಹೀಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವಿರೆಂದು ಅಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.