ಸಾಗರ : ತಾಲ್ಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ವರದಾ ನದಿ ಉಗಮ ಸ್ಥಾನವಾದ ವರದಾಮೂಲದ ವರದಾಂಬಿಕೆ ಸನ್ನಿಧಾನದಲ್ಲಿ ಸನ್ನಿಧಾನದಲ್ಲಿ ಡಿ. ೧೯ರಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಏರ್ಪಡಿಸಿದೆ.

ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ೬-೩೦ಕ್ಕೆ ವರದಾನದಿ ಉಗಮ ಸ್ಥಾನದವರೆಗೆ ಸಹಸ್ರ ದೀಪೋತ್ಸವ ಇರುತ್ತದೆ. ರಾತ್ರಿ ೮-೩೦ಕ್ಕೆ ಬಡಗುತಿಟ್ಟಿನ ಪ್ರಸಿದ್ದ ಕಲಾವಿದರಿಂದ

ಗದಾಯುದ್ದ ಯಕ್ಷಗಾನ ಬಯಲಾಟ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರತಿಷ್ಟಾನದ ಪ್ರಕಟಣೆಯಲ್ಲಿ ಕೋರಿದೆ.