ಶಿವಮೊಗ್ಗ, ಡಿ.12:
ಡಿ.13 ರ ನಾಳಿನ ಶನಿವಾರದಂದು ನಗರದ ಹೊರವಲಯದಲ್ಲಿರುವ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನಲ್ಲಿ ಎಐ (ಕೃತಕ ಬುದ್ಧಿಮತ್ತೆ) ಪ್ರಾಜೆಕ್ಟ್ಗಳನ್ನು ತಯಾರಿಸಿರುವ ಮಕ್ಕಳು ತಮ್ಮ ಹೊಸ ಆವಿಷ್ಕಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಸ್ವಯಂ ಕಲಿಕೆಯಲ್ಲಿ ನಿಪುಣ ಶಾಲೆಯ ಮಕ್ಕಳ ಈ ವಿಶೇಷ ಪ್ರಯತ್ನವನ್ನು ಜಿಲ್ಲೆಯ ರಕ್ಷಣಾಧಿಕಾರಿಗಳಾದ ಜಿ ಕೆ ಮಿಥುನ್ ಕುಮಾರ್ ರವರು ಉದ್ಘಾಟಿಸಲಿದ್ದಾರೆ.

ಶಾಲೆಯ ಮಕ್ಕಳಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ, ಅದರ ಮೌಲ್ಯ ಮತ್ತು ಭವಿಷ್ಯದ ತಂತ್ರಜ್ಞಾನ ಬಗ್ಗೆ ಅರಿವು ಮೂಡಿಸಲು ಇದು ಒಳ್ಳೆಯ ಅವಕಾಶವಾಗಿದೆ ಎಂದು ಶಾಲೆಯ ವ್ಯವಸ್ಥಾಪಕ ಟ್ರಸ್ಟೀ ಕಿರಣ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

70 ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು, 60 ಕ್ಕೂ ಹೆಚ್ಚು ವೆಬ್ಸೈಟ್ ಗಳು 15 ಕ್ಕೂ ಹೆಚ್ಚು (ಕೃತಕ ಬುದ್ಧಿಮತ್ತೆ) ಬಳಸಿ ತಯಾರಿಸಿದ ವಿಡಿಯೋ ಗಳು ಮತ್ತು ಅವಿಷ್ಕಾರಗಳನ್ನು ಈ AI ಫೆಸ್ಟ್ ನಲ್ಲಿ ಆಯೋಜಿಸಲಾಗಿದೆ. ಅತ್ಯಂತ ವಿನೂತನವಾದ ಶಾಲೆಯ ಈ ಪ್ರಯತ್ನ ಎಲ್ಲರಿಗೂ ಮುಕ್ತವಾಗಿದ್ದು ಆಸಕ್ತರು ಭಾಗವಹಿಸಬಹುದಾಗಿದೆ. ಸಂಜೆ 4 ರಿಂದ 6 ಗಂಟೆಯ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಆಹ್ವಾನವಿದೆ.
ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗೆ ನೀವು ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಅನ್ನು ಸಂಪರ್ಕಿಸಲು ಕಿರಣ್ ಕುಮಾರ್ ಕೋರಿದ್ದಾರೆ.