ಶಿವಮೊಗ್ಗ ಡಿ.11:
ಕಳೆದ 2023 ನೇ ಸಾಲಿನಲ್ಲಿ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 21 ವರ್ಷದ ವಯಸ್ಸಿನ ವ್ಯಕ್ತಿಯೊಬ್ಬನು ಲೈಂಗಿನ ದೌರ್ಜನ್ಯ ಎಸಗಿರುವ ಬಗ್ಗೆ ಭದ್ರಾವತಿ ನ್ಯೂಟನ್ ಟೌನ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೊ ಕಾಯ್ದೆ ರೀತ್ಯಾ ಪ್ರಕರಣವು ದಾಖಲಾಗಿರುತ್ತದೆ

ತನಿಖಾಧಿಕಾರಿಗಳಾದ ಅಂದಿನ ಭದ್ರಾವತಿ ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ ಅವರು ತನಿಖೆ ಕೈಗೊಂಡು ಸದರಿ ಪ್ರಕರಣದ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು .

ಸರ್ಕಾರದ ಪರವಾಗಿ ಶ್ರೀ ಶ್ರೀಧರ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಆರೋಪಿತನ ವಿರುದ್ಧ ಆರೋಪವು ಧೃಡಪಟ್ಟ ಹಿನ್ನೆಲೆಯಲ್ಲಿ
ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ನಿಂಗನಗೌಡ ಭ ಪಾಟೀಲ್ ರವರು ಆರೋಪಿತನಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1,85,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.