ಶಿವಮೊಗ್ಗ,ಡಿ.09:
ಇಲ್ಲಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ಕಾಲಭೈರವ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಡಿ.12 ರ ಶುಕ್ರವಾರ ಬೆಳಿಗ್ಗೆ 5:30ಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ

ಜಲಾಭಿಷೇಕ. ಕ್ಷೀರಭಿಷೇಕ.ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 108 ಎಳನೀರು, ಅಭಿಷೇಕ, ಭಸ್ಮಾಭಿಷೇಕ ವಿಶೇಷವಾಗಿ ಹೂವಿನ ಅಲಂಕಾರ ನೆರವೇರಲಿದೆ. 7.30 ಕ್ಕೇ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರುತ್ತದೆ.

ಸಂಜೆ 4:30ಕ್ಕೆ ಶ್ರೀ ಕಾಲಭೈರವ ಹೋಮ 6:30ಕ್ಕೆ ಪೂರ್ಣಾಹುತಿ ಮತ್ತು ಶ್ರೀರಾಮಪ್ರಿಯ ಭಜನಾ ಮಂಡಳಿ ಇವರಿಂದ ಭಜನೆ ಕಾರ್ಯಕ್ರಮ ನೆರವೇರಲಿದೆ. 7:00 ಪಲ್ಲಕ್ಕಿ ಉತ್ಸವ ಮತ್ತು ಮಹಾಮಂಗಳಾರತಿ ನೆರವೇರಲಿದೆ ನಂತರ 8 ಗಂಟೆಗೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದ್ದಾರೆ.