ಶಿವಮೊಗ್ಗ : ನಗರದ ಪಶುವೈದ್ಯಕೀಯ ಕಾಲೇಜು ರಸ್ತೆಯಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಈಶ್ವರ(೩೦) ಎಂಬು ಗುರುತಿಸಲಾಗಿದ್ದು, ಇವರು ಅಶೋಕನಗರ ನಿವಾಸಿಯಾಗಿದ್ದು, ಸರ್ಕಾರಿ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈತ ಮದ್ಯವ್ಯಸನಿಯಾಗಿದ್ದ

ಎಂದು ತಿಳಿದು ಬಂದಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ರೈಲ್ವೆಹಳಿಯ ಮೇಲೆ ಬಿದ್ದ ಮೃತದೇಹವನ್ನು ತೆರವುಗೊಳಿಸಿ ತನಿಖೆ ಕೈಗೊಂಡಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶು ವೈದ್ಯಕೀಯ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಹಾದುಹೋಗುವ ರೈಲ್ವೆಹಳಿಯ ಎರಡೂ ಕಡೆಗಳಲ್ಲಿ ತಡೆಗೋಡೆ ಅಥವಾ ಪೆನ್ಸಿಂಗ್ ಮಾಡಬೇಕೆಂಬುದು ಸ್ಥಳೀಯರು ಒತ್ತಾಯಿಸಿ ರೈಲ್ವೆ ಇಲಾಖೆ ಮತ್ತು ಸಂಸದರಿಗೆ ಮನವಿ ಮಾಡಿದ್ದರು. ಪ್ರತಿ ತಿಂಗಳಿಗೊಮ್ಮೆ ಈ ಭಾಗದಲ್ಲಿ ರೈಲ್ವೆಹಳಿಯ ಮೇಲೆ ಅಪಘಾತ ಅನಾಹುತ ಸಂಭವಿಸುತ್ತಿದ್ದು, ಇತ್ತೀಚೆಗಷ್ಟೇ ನಾಲ್ಕು ಎಮ್ಮೆಗಳು ಹಳಿದಾಟುವಾಗ ರೈಲಿಗೆ ಬಲಿಯಾಗಿದ್ದವು. ಅಲ್ಲದೆ ಜೆ.ಹೆಚ್. ಪಟೇಲ್ ಬಡಾವಣೆಗೆ ಮತ್ತು ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಹಳಿದಾಟುವಾಗ ಅಪಾಯ ಸಂಭವಿಸಲಿದ್ದು, ಕೂಡಲೇ ಇಲಾಖೆ ಸೂಕ್ತ ಜಾಗೃತಿಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.