ಶಿವಮೊಗ್ಗ, ನ.18:
ರಾಜ್ಯದ ವಿವಿಧ ಠಾಣೆಯ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಹಿರಿಯ ಐಪಿಎಸ್ ಅಧಿಕಾರಿ
ಸೌಮೇಂದ್ರ ಮುಖರ್ಜಿ ರವರು ಅದೇಶಿಸಿದ್ದಾರೆ .
ಈ ಹಿಂದೆ ಶಿವಮೊಗ್ಗದ ವಿನೋಬನಗರ ಠಾಣೆ ಸೇರಿದಂತೆ ಭದ್ರಾವತಿ ಪೇಪರ್ ಟೌನ್ ಠಾಣೆಯಲ್ಲಿ
ಪಿಎಸ್ಐ ಹಾಗೂ ಪಿಐ ಅಗಿ ಅಧಿಕಾರವಹಿಸಿ ಕೊಂಡಿದ್ದ ರಾಘವೇಂದ್ರ ಕಾಂಡಿಕೆ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಟೌನ್ ಠಾಣೆಯಿಂದ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಸ್ಪೆಕ್ಟರ್ ಅಗಿ ವರ್ಗಾವಣೆಗೊಂಡು, ಅಧಿಕಾರ ವಹಿಸಿಕೊಂಡಿದ್ದಾರೆ.

ಇವರು ಭದ್ರಾವತಿಯಲ್ಲಿ ಪಿಐ ಅಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಎಂಟು ಕೊಲೆ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೂ ಚಿತ್ರದುರ್ಗದ ಹಿರಿಯೂರು ಟೌನ್ ಠಾಣೆಯಲ್ಲಿ ಸಹ ಲಕ್ಷಾಂತರ ಬೆಲೆ ಬಾಳುವ ಬಂಗಾರದ
ಕಳ್ಳತನ ಪ್ರಕರಣಗಳನ್ನು ಬೇಧಿಸಿ
ಅರೋಪಿಗಳನ್ನು ಜೈಲಿಗಟ್ಟಿದ್ದು, ವಿಶೇಷ.

ಗ್ರಾಮಾಂತರ ಠಾಣೆಯಲ್ಲಿ ಪಿಐಯಾಗಿದ್ದ ಸತ್ಯನಾರಾಯಣ್ ರವರು ಕರ್ನಾಟಕ ಲೋಕಾಯುಕ್ತಾಕ್ಕೆ,
ಭದ್ರಾವತಿಯಲ್ಲಿ ಪೇಪರ್ ಟೌನ್ ಪೋಲಿಸ್ ಠಾಣೆಯಲ್ಲಿದ್ದ ನಾಗಮ್ಮ ರವರು ಭದ್ರಾವತಿಯ ಟೌನ್ ವೃತ್ತಕ್ಕೆ
ಹಾಗೂ ಕರ್ನಾಟಕ ಲೋಕಾಯುಕ್ತ ವರ್ಗಾವಣೆಯ ಅದೇಶದಲ್ಲಿದ್ದ ರಾಜಶೇಖರ್ ಎಲ್. ಮಾಳೂರು
ವೃತ್ತಕ್ಕೆ ವರ್ಗಾವಣೆಗೊಂಡಿರುತ್ತಾರೆ.