ಶಿವಮೊಗ್ಗ : ಆನಂದಪುರ ಪಟ್ಟಣದ ಮೀನು ಮಾರುಕಟ್ಟೆಯ ಮುಂಭಾಗದಲ್ಲಿನ ಪಾಳು ಬಿದ್ದ ಮನೆಯೊಂದರಲ್ಲಿ ಸುಮಾರು 60 ವರ್ಷಕ್ಕೂ ಹೆಚ್ಚಿನ ವರ್ಷದ ಪುರುಷನೊಬ್ಬನ ಶವ ಪತ್ತೆಯಾಗಿದೆ.
ವಿಷಯ ತಿಳಿದು ಸ್ಥಳೀಯ ಗ್ರಾಮಾಡಳಿತ, ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸಾವನ್ನಪ್ಪಿದ ವ್ಯಕ್ತಿ ಯಾರು ಎಂದು ತಿಳಿದು ಬಂದಿಲ್ಲ.