ಶಿವಮೊಗ್ಗ, ಅ.04:
ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ 35 ನೇ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲು ಆದಿಚುಂಚನಗಿರಿ ಮಠ ತೀರ್ಮಾನಿಸಿದ್ದು,
ಇದೇ ಮೊದಲ ಬಾರಿಗೆ ದಾಸವರೇಣ್ಯ ಪುರಂದದಾಸದರೊಬ್ಬರ ಕೀರ್ತನೋತ್ಸವ ಮಾಜಿ ಸಚಿವ ಆರಗಜ್ಞಾನೇಂದ್ರ ಅವರ ಹುಟ್ಟೂರಿನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು.
ಶಿವಮೊಗ್ಗದ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಎರಡು ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು. ಇಂದು ಬೆಳಗ್ಗೆ 10ರಿಂದ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿರುವ ಸಹಕಾರ ಸಂಘ ಸಭಾಭವನದಲ್ಲಿ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿ ಉದ್ಘಾಟಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ
ಶ್ರೀ ನಾರಾಯಣ ಗುರು ಈಡಿಗ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ರೇಣುಕಾನಂದಪುರಿ ಸ್ವಾಮೀಜಿ., ಗೋಸಾಯಿ ಮಠ ಪೂಜ್ಯ ಶ್ರೀ ಮಂಜುನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಪೂಜ್ಯಶ್ರೀ ಶಿವಾನಂದ ಸ್ವಾಮೀಜಿ,
ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ,ಆರ್.ಎಂ. ಮಂಜುನಾಥಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್ ಸಿರಿಬೈಲು,ಇನ್ನು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಹಂತದ ಪುರಂದರ ಕೀರ್ತನಗಾಯನ ಮತ್ತು ದಾಸ ಸಾಹಿತ್ಯಕ್ಕೆ ಪುರಂದರ ದಾಸರ ಕೊಡುಗೆಗಳು ಕುರಿತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಇಂದು ಆರಂಭಗೊಂಡ ವಿಶೇಷ, ವಿಭಿನ್ನವಾದ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವ ಸಮಾರಂಭದಲ್ಲಿ ನಾಡಿನ ಖ್ಯಾತ ಗಾಯಕರು ಆಗಮಿಸಿ ವಿವಿಧ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಮೊದಲ ಅವಧಿಯಲ್ಲಿ: ವಿದ್ವಾನ್ ಪಣೀಂದ್ರ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆಯನ್ನು ನಡೆಸಿಕೊಡಲಿದ್ದಾರೆ.
2ನೇ ಅವಧಿ : ವಿದ್ವಾನ್ ಹೊಸಳ್ಳಿ.ಕೆ.ವೆಂಕಟರಾಂ,ವಿದ್ವಾನ್ ಹೊಸಳ್ಳಿ ಕೆ. ಸುಬ್ಬರಾವ್, ವಿದ್ವಾನ್ ಹೊಸಳ್ಳಿ ವಿ.ರಘುರಾಂ ಮತ್ತು ಸಂಗಡಿಗರಿಂದ ಪಿಟೀಲು ವಾದನ ನಡೆಸಿಕೊಡುವರು.
3ನೇ ಅವಧಿ: ವಿದ್ವಾನ್ ಶೃಂಗೇರಿ ನಾಗರಾಜ್ ರವರ ಶಿಷ್ಯ ವೃಂದದವರಿಂದ ಮತ್ತು ಆರಗ ಗ್ರಾಮದ ಭಜನಾ ಮಂಡಳಿಯವರಿಂದ ಹಾಡುಗಾರಿಕೆ.
4ನೇ ಅವಧಿ :ವಿದ್ವಾನ್ ಹುಮಾಯುನ್ ಹರ್ಲಾಪುರ್, ವಿದ್ವಾನ್ ನವಶಾದ್ ಹರ್ಲಾಪುರ್, ವಿದ್ವಾನ್ ನಿಶಾದ್ ಹರ್ಲಾಪುರ್ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಗಾಯನ.
5ನೇ ಅವಧಿ : ರಾಷ್ಟ್ರಪತಿ ಪ್ರಶಸ್ತಿ ವಿಜೇತ ವಿದ್ವಾನ್ ಮಾರುತಿ ಪ್ರಸಾದ್ ಬೆಂಗಳೂರು ಮತ್ತು ಸಂಗಡಿಗರಿಂದ ಹಾಡುಗಾರಿಕೆ.
6ನೇ ಅವಧಿ: ಪೂಜ್ಯ ಶ್ರೀ ಶ್ರೀ ಸಾಯಿ ಕೀರ್ತಿನಾಥ ಸ್ವಾಮೀಜಿ ಹಾಗೂ ವಿದ್ವಾನ್ ಮಾರುತಿ ಪ್ರಸಾದ್ ಅವರಿಂದ ಹಾರ್ಮೋನಿಯಂ, ಕೀಬೋರ್ಡ್,ಜುಗಲ್ ಬಂದಿ ಕಾರ್ಯಕ್ರಮ ನಡೆಯುವುದು.
ಖ್ಯಾತ ಸಂಗೀತಗಾರರಿಂದ ಸಾಮೂಹಿಕ ಗಾಯನ ಹಾಗೂ ಸತ್ಸಂಗ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು, ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕಾಗಿ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.