ಶಿವಮೊಗ್ಗ : ಗೋವರ್ಧನ ಟ್ರಸ್ಟ್ ವತಿಯಿಂದ ವಿನೋಬನಗರದ “ಶಿವಾಲಯ” ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋವರ್ಧನ ಟ್ರಸ್ಟ್ ಮೂಲಕ ಸಾಮೂಹಿಕ ಗೋಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ನಾಯಕರು ಮತ್ತು ಕುಟುಂಬದವರೊಂದಿಗೆ ಪ್ರತ್ಯಕ್ಷವಾಗಿ ಸ್ವತಃ ಗೋಪೂಜೆಯನ್ನು ಪರಮ ಪೂಜ್ಯರಾದ ಶ್ರೀ.ಷ.ಬ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಖಾಸ ಶಾಖಾಮಠ ಯಡಿಯೂರು. ಶ್ರೀಷ.ಬ್ರ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ

ಬಿಳಿಕಿ ದಿವ್ಯಾ ಸಾನಿಧ್ಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯಡಿಯೂರು ಗುರುಗಳು ಗೋವರ್ಧನ ಟ್ರಸ್ಟ್ ಗೆ ೫೧,೦೦೦ ಸಾವಿರ ಹಣವನ್ನು ದೇಣಿಗೆಯಾಗಿ ನೀಡಿದರು. ಸಾರ್ವಜನಿಕರು ಕೂಡ ಈ ಗೋಪೂಜೆಯಲ್ಲಿ ಪ್ರತ್ಯೇಕವಾಗಿ ಕುಟುಂಬದೊಂದಿಗೆ ಭಾಗವಹಿಸಿದರು. ಈ ಸಂದರ್ಭದಲ್ಲಿ ಗೋಪೂಜೆಗೆ ಅವಕಾಶ ಕಲ್ಪಿಸಿಕೊಟ್ಟ ಗೋವರ್ಧನ ಟ್ರಸ್ಟ್ಗೆ ಸಾರ್ವಜನಿಕರು ಧನ್ಯವಾದ ಸಮರ್ಪಿಸಿದರು.

ನಗರದ ರವೀಂದ್ರನಗರದ ಗಣಪತಿ ದೇವಸ್ಥಾನ, ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ, ವಾಸವಿ ಪಬ್ಲಿಕ್ ಶಾಲೆ, ಶ್ರೀ ಶನೈಶ್ಚರ ದೇವಸ್ಥಾನ, ಶಾಂತಿನಗರ, ಶ್ರೀ ಪಾರ್ವತಮ್ಮ ದೇವಸ್ಥಾನ ಹರಿಗೆಯಲ್ಲಿ ದೀಪಾವಳಿ ಗೋಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಹಾಗೂ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಸೋಮಣ್ಣ, ಕೆಂಚಪ್ಪ, ರೇಣುಖರಾಥ್ಯ, ರತ್ನಮ್ಮ, ಉಮೇಶ್ ಆರಾಥ್ಯ, ರುದ್ರೇಶ್,ಲೋಕೇಶ್, ವಿಕ್ರಂ, ಸುನಂದ, ಆಶಾಚನ್ನಬಸಪ್ಪ, ರುದ್ರಯ್ಯಶಾಸ್ತ್ರಿ, ಕೆ.ಈ. ಕಾಂತೇಶ್, ಶ್ರೀಕಾಂತ್, ಕೃಷ್ಣಮೂರ್ತಿ, ಮೋಹನ್ರಾವ್ ಜಾದವ್, ಯಶೋಧರ ಹೆಗಡೆ ಹಾಗೂ ಗೋಪ್ರೇಮಿಗಳು ಉಪಸ್ಥಿತರಿದರು.