ಶಿವಮೊಗ್ಗ, ಸೆ.01:
ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ,
ಪ್ರಾಥಮಿಕ ಬಾಲಕ ಬಾಲಕಿಯರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಕಬ್ಬಡಿ ಆಟದಲ್ಲಿ ಮಕ್ಕಳು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇನ್ಪಾಂಟ್ ಜೀಸಸ್ ಶಾಲೆಯ ಮುಖ್ಯಶಿಕ್ಷಕರು ಮೆಡಲ್ ಹಾಗೂ ಟ್ರೋಫಿ ವಿತರಿಸಿದರು.

ರಾಮಕೃಷ್ಣ ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಸಾಧಕ ಮಕ್ಕಳನ್ನು, ಶಿಕ್ಷಕರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಮುಖ್ಯಶಿಕ್ಷಕಿ ಅಶ್ವಿನಿ, ದೈಹಿಕ ಶಿಕ್ಷಕ ರಾಘವೇಂದ್ರ ಹಾಗೂ ಇತರರಿದ್ದರು.