ಶಿವಮೊಗ್ಗ, ಆಗಸ್ಟ್ 25;: 2025-26ನೇ ಸಾಲಿನಲ್ಲಿ ನಾಡಹಬ್ಬವಾದ ದಸರಾ ಮಹೋತ್ಸವನ್ನು ಶಿವಮೊಗ್ಗ ಮಹಾನಗರಪಾಲಿಕೆ ವತಿಯಿಂದ ಸೆ.22 ರಿಂದ ಅ. 02 ರವರೆಗೆ ಆಚರಿಸಲು ತೀರ್ಮಾನಿಸಲಾಗಿರುತ್ತದೆ. ಈ ಸಂಬಂಧ 14 ದಸರಾ ಸಮಿತಿಗಳನ್ನು ರಚಿಸಿದ್ದು, ವಿವಿಧ

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಸರಾ ಸಮಿತಿಗಳ ವತಿಯಿಂದ ಕೆಳದಿ ಶಿವಪ್ಪ ನಾಯಕ ಅರಮನೆ,

ಕುವೆಂಪು ರಂಗಮಂದಿರ, ಡಾ|| ಬಿ.ಆರ್. ಅಂಬೇಡ್ಕರ್ ಭವನ, ಅಲ್ಲಮಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್) ಹಾಗೂ ಇತರೆ ವೇದಿಕೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುತ್ತದೆ.

ಶಿವಮೊಗ್ಗ ಮಹಾನಗರಪಾಲಿಕೆಯ 14 ದಸರಾ ಸಮಿತಿಯ ವತಿಯಿಂದ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಕಲಾವಿದರಿಂದ / ಕಲಾ ತಂಡಗಳಿಂದ ಸೆ. 06 ರೊಳಗೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ನೇರವಾಗಿ ಅಥವಾ

ಮಿಂಚಂಚೆ shivamoggaccdasara@gmail.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯುಕ್ತರ ಕಾರ್ಯಾಲಯದಲ್ಲಿರುವ ‘ದಸರಾ ಶಾಖೆಗೆ” ಸಂಪರ್ಕಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
—————–