
ಶಿವಮೊಗ್ಗ, ಜು.28:
ಉದ್ಯಮಿ ಎಂಬುದಕ್ಕಿಂತ ಹೆಚ್ಚಾಗಿ ಸರಳ, ಸಜ್ಜನ ಹಾಗೂ ನೊಂದವರ ನೆರಳಾಗಿರುವ ಶ್ರೀ ಶಬರೀಶ್ ಸ್ಟೋನ್ ಕ್ರಷರ್ ಮಾಲೀಕರಾದ ಎಸ್. ಮಂಜುನಾಥ್ ಅವರ ಜನುಮದಿನವನ್ನು ನಿನ್ನೆ ಶಿವಮೊಗ್ಗ ಸೇರಿದಂತೆ ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು ಮೈಸೂರಿನಲ್ಲಿಯೂ ಆಚರಿಸಿದ್ದು ವಿಶೇಷ.

ಶಿವಮೊಗ್ಗದ ಗುಡ್ ಲಕ್ ಆರೈಕೆ ಕೇಂದ್ರ ಸೇರಿದಂತೆ 10 ಹಲವಡೆ ಜನುಮದಿನದ ನಿಮಿತ್ತ ವಿಶೇಷ ಅನ್ನಸಂತರ್ಪಣೆಯ ಅವಕಾಶವನ್ನು ಕಲ್ಪಿಸಲಾಗಿತ್ತು.

ಬೆಳಗ್ಗೆ ಏಳರಿಂದಲೇ ಮಂಜುನಾಥ್ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಜನುಮದಿನದ ನಿಮಿತ್ತ ಕಾಶಿಪುರದ ಸ್ವಗೃಹದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಪಾರ ಸಂಖ್ಯೆಯ ಸ್ನೇಹಿತರು ಅಭಿಮಾನಿಗಳು, ಬಂದು- ಮಿತ್ರರು ಹಾಗೂ ತಮಿಳು ಸಮಾಜ ಸೇರಿದಂತೆ ಎಲ್ಲಾ ಸಮಾಜದ ನಾಯಕರು, ರಾಜಕೀಯ ನಾಯಕರು ಮಂಜುನಾಥ್ ಅವರಿಗೆ ಶುಭ ಹಾರೈಸಿದರು.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ, ಶುಭಕೋರಲಾಯಿತು. ಕಾಶಿಪುರ ವ್ಯಾಪ್ತಿಯ ಮಂಜುನಾಥ್ ಅವರು ಈಗಲೂ ಕಾಶಿಪುರಕ್ಕೆ ಸೀಮಿತವಾಗದೆ ಎಲ್ಲಾ ಕಡೆ ನೊಂದವರಿಗೆ ನಿರಾಶ್ರಿತರಿಗೆ ನಿರಂತರವಾಗಿ ನೆರವಾಗುತ್ತಿದ್ದಾರೆ.

ಪಕ್ಷಕ್ಕಿಂತ ಎಂಬುದಕ್ಕಿಂತ ಮುಖ್ಯವಾಗಿ ವ್ಯಕ್ತಿಗತವಾದ ನಾಯಕರ ಜೊತೆಗಿರುವ ಮಂಜುನಾಥ್ ಅವರು ಈಗಲೂ ಸಮಾಜದ ಹತ್ತು ಹಲವು ಮುಖಗಳಲ್ಲಿ ಚಿರಪರಿಚಿತರು ಹಾಗೂ ಸಹಾಯ ಹಸ್ತ ನೀಡುವಂತಹವರು ಎಂಬ ಅಭಿಪ್ರಾಯ ಮೂಡಿದೆ
ಅವರ ಜನುಮದಿನದ ವಿಶಿಷ್ಟ ಆಚರಣೆ ನಿಜಕ್ಕೂ ವಿಶೇಷವೇ ಹೌದು.